ನವದೆಹಲಿ: ಆಯೋಧ್ಯೆ ಹುಂಡಿಯಲ್ಲಿ ಕಳ್ಳತನ ಆರೋಪದ ಹಿನ್ನೆಲೆಯಲ್ಲಿ ಆರೋಧ್ಯೆ ಶ್ರೀರಾಮ ತ್ರಿರ್ಥಕ್ಷೇತ್ರ ಟ್ರಸ್ಟ್ ತನ್ನ ಲೆಕ್ಕದ ವರದಿಯನ್ನು ಬಿಡುಗಡೆ ಮಾಡಿದೆ.
2020ರಿಂದ ನಿಧಿ ಸಮರ್ಪಣಾ ವರದಿಯನ್ನು ನೀಡಲಾಗಿದ್ದು, ಕಾಣಿಕೆ ರೂಪದಲ್ಲಿ 3,264 ಕೋಟಿ ರು. ಸಂದಾಯವಾಗಿದೆ ಎಂದು ವರದಿ ತಿಳಿಸಿದೆ. ಅದೇ ರೀತಿ ದೇವಾಲಯ ನಿರ್ಮಾಣಕ್ಕೆ 2370 ಕೋಟಿ ರು. ಖರ್ಚು ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಬಾಲರಾಮ ಪ್ರತಿಷ್ಠಾಪನೆಗೆ 113 ಕೋಟಿ ರು. ಕರ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಎಲ್ಲ ಆಡಿಟ್ ವರದಿಯನ್ನು ಎಸ್ಐಟಿ ಪರಿಶೀಲನೆ ನಡೆಸುತ್ತಿದೆ.

