ಆಧುನಿಕ ಯುಗದಲ್ಲಿ ಎಲ್ಲಿ ನೋಡಿದರೂ ರೋಬೋಟ್ ಗಳದ್ದೇ ಹವಾ. ಹೋಟೆಲ್ ಮಾಲಿ ಇಂದ ಇಡಿದು ದೊಡ್ದ ದೊಡ್ದ ಕಂಪನಿಗಳ ಕೆಲಸಗಾರರ ವರೆಗೆ ರೋಬೋಟ್ ಗಳು ತಮ್ಮ ಛಾಪನ್ನು ಮೂಡಿಸುತ್ತಿವೆ. ಅದರಲ್ಲೂ ಉದ್ಯೋಗಕ್ಕೆ ಕುತ್ತನ್ನು ರೋಬೋಟ್ ಗಳು ಈಗಾಗಲೇ ತಂದಿವೆ.
ಆದ್ರೆ ಈಗ ಮಹಿಳೆಯರು ಮುಂದಿನ 10 ವರ್ಷಗಳಲ್ಲಿ ಪುರುಷರಿಗಿಂತ ಹೆಚ್ಚು ರೋಬೋಟ್ ಗಳನ್ನು ಇಷ್ಟ ಪಡುತ್ತಾರೆ. ಮತ್ತು ಅವರು ಲೈಂಗಿಕತೆಗೆ ರೋಬೋಟ್ ಗಳನ್ನೇ ಬಳಸುತ್ತಾರೆ ಎಂದು ವರದಿಯೊಂದು ಹೊರಬಿದ್ದಿದೆ. ಇದನ್ನು ಡಾ ಇಯಾನ್ ಪಿಯರ್ಸನ್ ಎಂಬ ಭವಿಷ್ಯಶಾಸ್ತ್ರಜ್ಞರು ತಿಳಿಸಿದ್ದಾರೆ. ಇವರ ಪ್ರಕಾರ ಯಂತ್ರಗಳೊಂದಿಗೆ ಮನುಷ್ಯರ ಪ್ರೀತಿಯು ಶುರುವಾಗುತ್ತದೆ ಎಂದು ಹೇಳಿದ್ದಾರೆ.
ಡಾ ಇಯಾನ್ ಪಿಯರ್ಸನ್ ಹೇಳುವಂತೆ ಹೆಣ್ಣು ಮಕ್ಕಳು ಪೋರ್ನ್ ವೀಡಿಯೋ ನೋಡುವುದಕ್ಕಿಂತ ರೋಬೋಟ್ ಗಳೊಂದಿಗೆ ಲೈಂಗಿಕತೆಯನ್ನು ಬೆಳೆಸುತ್ತಾರೆ. ಮುಂದಿನ 2050 ರ ವೇಳೆಗೆ ಇದು ಆಗುವ ಸಾಧ್ಯತೆ ಇದೆ ಎನ್ನುತ್ತಾರೆ.
ರೋಬೋಟ್ ನಲ್ಲಿರುವ ಆರ್ಟಿಫಿಷಿಯಲ್ ಇಂಟಲಿಜನ್ಸ್ ಮನುಷ್ಯರ ಭಾವನೆಗಳಿಗೆ ಹೊಂದಿಕೊಳ್ಳುತ್ತದೆ. ಕಾಲ ಕ್ರಮೇಣ ರೋಬೋಟ್ ಗಳಿಗೆ ಹೊಂದಿಕೊಳ್ಳುತ್ತಾರೆ. ಈ ರೋಬೋಟ್ ಗಳನ್ನು ಪ್ರೀತಿಸುವವರನ್ನು ರೋಬೋಫಿಲಿಯಾ ಎಂದು ಕರೆಯಲಾಗುತ್ತದೆ. ಅವರು ಇದರಲ್ಲಿಯೇ ಖುಷಿಯನ್ನು ಪಡೆಯುತ್ತಾರೆ.
ಸದ್ಯ ಇದನ್ನು ತಮಾಷೆ ಎಂದು ತಳ್ಳಿ ಹಾಕುವಂತಿಲ್ಲ ಈಗಾಗಲೇ ಡೇವಿಡ್ ಮಿಲ್ಸ್ ಎಂಬುವವರು ತನ್ನ ಹೆಂಡತಿಗೆ ವಿಚ್ಛೇದನವನ್ನು ಕೊಟ್ಟು ಎರಡು ವರ್ಷದಿಂದ ರೋಬೋಟ್ ನೊಂದಿಗೆ ಸಂಸಾರ ಮಾಡುತ್ತಿದ್ದಾರೆ.
“ಡೇವಿಡ್ ಮಿಲ್ಸ್ ಹೇಳುವಂತೆ ಆ ರೋಬೋಟ್ ನಿಂದ ಪಡೆಯುವ ಸುಖ ಯಾರಿಂದಲೂ ದೊರೆತಿಲ್ಲ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.”

