ರಾಜಕೀಯ ಸುದ್ದಿ

2 ನೇ ಮಹಾಯುದ್ಧದಲ್ಲಿ ಅಡಗಿಸಿದ್ದ ಬಾಂಬ್: 400 ಕ್ಕೂ ಹೆಚ್ಚು ಮನೆಗಳ ಸ್ಥಳಾಂತರ ಆದೇಶ

Share It

ದ್ವಿತೀಯ ವಿಶ್ವ ಯುದ್ಧದ ವೇಳೆಯಲ್ಲಿ ಐರ್ಲೆಂಡ್ ನಲ್ಲಿ ಸ್ಫೋಟಕ ಸಾಧನವನ್ನು ಅಡಗಿಸಿಟ್ಟಿದ್ದರೆಂಬ ಹಿನ್ನೆಲೆಯಲ್ಲಿ ಹೊರ ತೆಗೆಯುವ ಕಾರ್ಯಾಚರಣೆ ಶುರು ಮಾಡಿರುವ ಹಿನ್ನೆಲೆಯಲ್ಲಿ 400 ಕ್ಕೂ ಹೆಚ್ಚು ಮನೆಗಳನ್ನು ಸ್ಥಳಾಂತರ ಮಾಡುವುದಕ್ಕೆ ಆಜ್ಞೆ ಮಾಡಲಾಗಿದೆ.

ಪೂರ್ವದ ನ್ಯೂಟೌನಾರ್ಡ್ಸ್‌ನಲ್ಲಿ ಪತ್ತೆಯಾಗಿರುವ ಶಂಕಿತ ಬಾಂಬ್ ಅನ್ನು ತೆಗೆದುಹಾಕುವ ಕಾರ್ಯಾಚರಣೆಯು ಐದು ದಿನಗಳಿಗಿಂತ ಹೆಚ್ಚು ಕಾಲ ನಡೆಯಲಿದೆ ಎಂದು ಪೊಲೀಸರು ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ನಾರ್ತ್ ಡೌನ್ ಮತ್ತು ಆರ್ಡ್ಸ್ ಡಿಸ್ಟ್ರಿಕ್ಟ್ ಕಮಾಂಡರ್ ಸೂಪರಿಂಟೆಂಡೆಂಟ್ ಜಾನ್‌ಸ್ಟನ್ ಮೆಕ್‌ಡೊವೆಲ್ ಅವರು ಸಮಸ್ಯೆಗೆ ಒಳಗಾಗಿರುವ ಜನರ ತಾಳ್ಮೆಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

ಜನರ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ಸ್ಪಂಧಿಸಲಿದ್ದಾರೆ. ಸ್ಥಳದಿಂದ ವಾಹನಗಳನ್ನು ತೆರವುಗೊಳಿಸಲು ಸೂಚನೆ ನೀಡಿದೆ. ತಮ್ಮ ಮನೆಯನ್ನು ವರ್ಗಾವಣೆ ಮಾಡುವವರಿಗೆ ಸಹಾಯ ಧನವನ್ನು ಸಹ ನೀಡಲಾಗುತ್ತದೆ. ಜೊತೆಗೆ ತುರ್ತು ಬೆಂಬಲ ಕೇಂದ್ರವನ್ನು ಸಹ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.


Share It

You cannot copy content of this page