ಸುದ್ದಿ

ಖಾಸಗಿ ಬಸ್-ಬೈಕ್ ಮಧ್ಯೆ ಅಪಘಾತ

Share It

ಖಾಸಗಿ ಬಸ್ ಹಾಗೂ ಬೈಕ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನಗಿರಿ ಪಟ್ಟಣ ಹೊರವಲಯದ ಅಗ್ನಿಶಾಮಕ ಠಾಣೆ ಮುಂಭಾಗದ ಹೆದ್ದಾರಿಯ ತಿರುವಿನಲ್ಲಿ ತಡರಾತ್ರಿ ನಡೆಯಿತು.‌

ಚಿತ್ರದುರ್ಗ ತಾಲೂಕಿನ ಕೋಡಿರಂಗವ್ವನಹಳ್ಳಿಯ ಮಂಜುನಾಥ (25), ಹೊಳಲ್ಕೆರೆ ತಾಲ್ಲೂಕಿನ ಗಣೇಶ್ ಗುಂಡಿಮಡು (27) ಮೃತಪಟ್ಟ ಬೈಕ್ ಸವಾರರೆಂದು ಗುರುತಿಸಲಾಗಿದೆ.

ಚನ್ನಗಿರಿ ಕಡೆಯಿಂದ ಚಿತ್ರದುರ್ಗದ ಕಡೆಗೆ ಹೋಗುತ್ತಿದ್ದ ಬೈಕ್‌ಗೆ ಬಸ್ ಡಿಕ್ಕಿಯಾಗಿದೆ. ಬಸ್ ಚಾಲಕ ಪರಾರಿಯಾಗಿದ್ದಾನೆ. ಅಪಘಾತದ ತಕ್ಷಣ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಡಿಕ್ಕಿಯಿಂದ ಎರಡೂ ವಾಹನಗಳು ಅಕ್ಷರಶಃ ನಜ್ಜುಗುಜ್ಜಾಗಿದ್ದವು. ಅಪಘಾತದ ಶಬ್ಧ ಜೋರಾಗಿದ್ದರಿಂದ ಸ್ಥಳಕ್ಕೆ ಧಾವಿಸಿದ ಸುತ್ತಮುತ್ತಲಿನ ಜನ ರಕ್ತದ ಮಡುವಿನಲ್ಲಿ ಸಿಲುಕಿದ್ದ ಪ್ರಯಾಣಿಕರ ಜೀವ ಉಳಿಸಲು ಹರಸಾಹಸಪಟ್ಟರೂ ಹನ್ನೊಂದು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದರು.


Share It

You cannot copy content of this page