ಬೆಂಗಳೂರು: ಚಿತ್ರ ನಟ ಧ್ರುವ ಸರ್ಜಾ ಜಿಮ್ ಟ್ರೈನರ್ ಮೇಲೆ ನೆನ್ನೆ ತಡರಾತ್ರಿ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಬನಶಂಕರಿ ಬಡಾವಣೆಯ ಕೆ.ಆರ್ ರಸ್ತೆಯಲ್ಲಿ ಹಲ್ಲೆ ನಡೆದಿದ್ದು, ಪ್ರಶಾಂತ್ ಮೇಲೆ ಇದ್ದಕ್ಕಿದ್ದಂತೆ ಬೈಕ್‌ನಲ್ಲಿ ಬಂದ ಅಪರಿಚಿತರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ವೈಯಕ್ತಿಕ ಕಾರಣಕ್ಕೆ ಹಲ್ಲೆ ಮಾಡಲಾಗಿದೆ ಎಂದು ಹೇಳುತ್ತಿದ್ದು, ರಸ್ತೆಯಲ್ಲಿ ಒಬ್ಬ ಸೆಲೆಬ್ರಿಟಿ ಅವರ ಜಿಮ್ ಟ್ರೈನರ್ ಮೇಲೆ ನಡೆದಿರುವ ಹಲ್ಲೆ ಕಾನೂನು ಸುವ್ಯವಸ್ಥೆಗೆ ಸಂಬAಧಿಸಿದ್ದಾಗಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿದೆ.
ಪ್ರಶಾಂತ್ ಮೇಲೆ ಹಲ್ಲೆ ಬನಶಂಕರಿ ಠಾಣೆಯಲ್ಲಿ ದಊರು ದಆಖಲು ಮಾಡಲಾಗಿದೆ. ಧ್ರುವ ಸರ್ಜಾ ನಿವಾಸದ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದ ಅಪರಿಚಿತರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಮಚ್ಚಿನಿಂದ ಹಲ್ಲೆ ನಡೆಸಿದ್ದು, ಸದ್ಯ ಪ್ರಶಾಂತ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಪ್ರಶಾಂತ್ ನಮ್ಮ ಹುಡುಗ, ಯಾವುದೇ ಕಾರಣಕ್ಕೆ ಹಲ್ಲೆಯಾಗಿದೆ ಎಂಬುದು ಗೊತ್ತಿಲ್ಲ. ಏನೇ ಆಗಲಿ, ಇಂತಹ ಸಂದರ್ಭದಲ್ಲಿ ನಾನು ಅವರ ಜತೆಗೆ ನಿಲ್ಲುತ್ತೇನೆ ಎಂದು ನಟ ಧ್ರುವ ಸರ್ಜಾ ಪ್ರಶಾಂತ್‌ಗೆ ಬೆಂಬಲ ಸೂಚಿಸಿದ್ದಾರೆ. ಪೂರ್ವ ಯೋಜಿತ ಕೃತ್ಯವಾಗಿದ್ದು, ಅದರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಆಗ್ರಹಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.