ಮೋದಿ ಬಳಿಕ ಬಿಜೆಪಿಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರು?- ಕೇಜ್ರಿವಾಲ್ ಪ್ರಶ್ನೆ
ಜೈಲಿನಿಂದ ಹೊರ ಬರುತ್ತಿದ್ದಂತೆ ಕೇಜ್ರಿವಾಲ್ ಘರ್ಜನೆ!
ನವದೆಹಲಿ: ಮೋದಿ ಬಳಿಕ ಬಿಜೆಪಿಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂದು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಜೈಲಿನಿಂದ ಹೊರ ಬರುತ್ತಿದ್ದಂತೆ ಅರವಿಂದ್ ಕೇಜ್ರಿವಾಲ್ ಸುದ್ದಿಘೋಷ್ಠಿ ನಡೆಸಿದ್ದು, ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ಘರ್ಜಿಸಿದ್ದಾರೆ. ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂದು ಇಂಡಿ ಕೂಟವನ್ನು ಬಿಜೆಪಿ ಕೇಳುತ್ತಲೇ ಇದೆ. ಈಗ ನಾನು ಬಿಜೆಪಿ ಕೇಳುತ್ತಿದ್ದೇನೆ, ನರೇಂದ್ರ ಮೋದಿ ಬಳಿಕ ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂದು ಕೇಳಿದ್ದಾರೆ.
ಮುಂದುವರೆದು ವಾಗ್ದಾಳಿ ನಡೆಸಿರುವ ಕೇಜ್ರಿವಾಲ್, ೭೫ ವರ್ಷದ ಬಳಿಕ ನಿವೃತ್ತರಾಗಬೇಕು ಎಂದು ಬಿಜೆಪಿಯಲ್ಲಿ ನಿಯಮವಿದೆ. ೨೦೨೫ರ ಸೆ.೧೭ಕ್ಕೆ ಪ್ರಧಾನಿ ಮೋದಿಗೆ ೭೫ ವರ್ಷವಾಗುತ್ತದೆ. ಅವರು ನಿವೃತ್ತರಾಗುತ್ತಾರೆಯೇ? ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಮಿತ್ರಾ ಮಹಾಜನ್ ಮತ್ತು ಯಶವಂತ್ ಸಿನ್ಹಾ ನಿವೃತ್ತರಾದರು. ಈಗ ಪ್ರಧಾನಿ ಮೋದಿ ಸೆ.೧೭ರಂದು ನಿವೃತ್ತರಾಗುತ್ತಾರೆ ಎಂದು ಕೌಂಟರ್ ಕೊಟ್ಟಿದ್ದಾರೆ.
ಈ ಬಾರಿ ಸರ್ಕಾರ ರಚನೆಯಾಗುತ್ತಿದ್ದಂತೆ ಮೊದಲು ಯೋಗಿ ಆದಿತ್ಯನಾಥ್ ಅವರನ್ನು ಹೊಸಕಿ ಹಾಕುತ್ತಾರೆ. ಅಮಿತ್ ಶಾರ ಅವರನ್ನು ಪ್ರಧಾನಿಯನ್ನಾಗಿ ಮಾಡುತ್ತಾರೆ. ಪ್ರಧಾನಿ ಮೋದಿ ಅಮಿತ್ ಶಾಗಾಗಿ ಮತ ಕೇಳುತ್ತಿದ್ದಾರೆ. ಮೋದಿ ಗ್ಯಾರಂಟಿಗಳನ್ನು ಅಮಿತ್ ಶಾ ಪೂರ್ತಿ ಮಾಡುತ್ತಾರೆಯೇ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.