ಬೆಂಗಳೂರು: ರೌಡಿಶೀಟರ್ ಒಬ್ಬನನ್ನು ಹಾಡುಹಗಲಲ್ಲೇ ಅಟ್ಟಾಡಿಸಿಕೊಂಡು ಕೊಚ್ಚಿಹಾಕಿರುವ ಘಟನೆ ಬೆಂಗಳೂರಿನ ರಾಮಸ್ವಾಮಿ ಪಾಳ್ಯದಲ್ಲಿ ಬಳಿ ನಡೆದಿದೆ.
ರೌಡಿಶೀಟರ್ ಆಗಿದ್ದ ಕಾರ್ತಿಕೇಯನ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ೪೦ ವರ್ಷ ವಯಸ್ಸಿನ ಕಾರ್ತಿಕೇಯನ್ ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದು, ಈತನ ಮೇಲೆ ರೌಡಿಶೀಟರ್ ತೆರೆಯಲಾಗಿತ್ತು.
ಕೆಲ ಕಾಲ ಜೈಲಿನಲ್ಲಿದ್ದು, ಹೊರಬಂದ ನಂತರ ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ನಡೆಸುತ್ತಿದ್ದ, ರಿಯಲ್ ಎಸ್ಟೇಟ್ ವ್ಯವಹಾರಗಳ ಸೆಟ್ಲಮೆಂಟ್‌ನAತರ ವ್ಯವಹಾರಗಳಲ್ಲಿ ಕೆಲವರನ್ನು ಎದುರುಹಾಕಿಕೊಂಡಿದ್ದ. ಹೆದರಿಸಿ, ಬೆದರಿಸಿ ಕೆಲವರಿಂದ ಸೈಟ್ ಬರೆಸಿಕೊಳ್ಳುವುದು ಸೇರಿ ಇನ್ನಿತರ ಚಟುವಟಿಕೆ ನಡೆಸುತ್ತಿದ್ದ ಎನ್ನಲಾಗಿದೆ.
ಈತ ತನ್ನ ಸ್ನೇಹಿತರ ಲೈಸೆನ್ಸ್ ಗನ್ ಹಿಡಿದು ಹೆದರಿಸುತ್ತಿದ್ದ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವುದು, ನಿವೇಶನಗಳಿಗೆ ಬೇಲಿ ಹಾಕಿಸುವುದು ಮಾಡುತ್ತಿದ್ದ. ಇದೇ ಕಾರಣಕ್ಕೆ ಕೆಲವು ರೌಡಿಶೀಟರ್‌ಗಳನ್ನು ಎದುರುಹಾಕಿಕೊಂಡಿದ್ದ ಎನ್ನಲಾಗಿದೆ. ಮೈಕೆಲ್ ಮಂಜು ಮತ್ತು ಸಹಚರರನ್ನು ಎದುರುಹಾಕಿಕೊಂಡಿದ್ದ, ಇದೇ ಕಾರಣಕ್ಕೆ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ.
ರಾಮಸ್ವಾಮಿ ಪಾಳ್ಯದ ನಡುರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಕಾರ್ತಿಕೇಯನ್‌ನನ್ನು ಕೊಲೆ ಮಾಡಲಾಗಿದ್ದು, ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆಯ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.