ಬೆಂಗಳೂರು,ಏ.16: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಳ ಮಾಡಲು ಬಿಬಿಎಂಪಿ ಹೊಸ ಪ್ಲಾನ್ ಮಾಡಿದೆ. ಈ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಹೆಚ್ಚಿಸಲು ಮನೆ ಮನೆಗೂ ಪಾಲಿಕೆಯ ಬಿಎಲ್ಒ, ಆಶಾ ಕಾರ್ಯಕರ್ತೆಯರು ಅಂಗನವಾಡಿ ಸಿಬ್ಬಂದಿಗಳು, ಪೌರಕಾರ್ಮಿಕರು ಭೇಟಿ ನೀಡಿ ಮತದಾನದ ಬಗ್ಗೆ ಅರಿವು ಹಾಗೂ ಮನೆ ಮನೆಗೂ ಸ್ಟಿಕರ್ ಅಂಟಿಸಲಾಗುತ್ತಿದೆ.
ಸ್ಟಿಕ್ಕರ್ ನಲ್ಲಿ ಮತದಾನಕ್ಕಿಂತ ಇನ್ನೊಂದಿಲ್ಲ ಖಚಿತವಾಗಿ ಮತದಾನ ಮಾಡುತ್ತೇನೆ ಎಂಬ ಸ್ಲೋಗನ್ ಮುದ್ರಿಸಲಾಗಿದೆ. ಜೊತೆಗೆ ಗೈಡ್ ಲೈನ್ಸ್ ಬಗ್ಗೆ ವೋಟರ್ ಸ್ಲಿಪ್ ನೀಡಲಾಗುತ್ತಿದೆ.