ಬೆಂಗಳೂರು : ಐಟಿ-ಬಿಟಿ ಹಬ್ ಎಂದೇ ಕರೆಯಲ್ಪಡುವ ವೈಟ್ ಫೀಲ್ಡ್ ನಲ್ಲಿರುವ ಐಟಿ ಕಂಪೆನಿಗಳನ್ನು ಗುರಿಯಾಗಿಸಿಕೊಂಡು ಸ್ಫೋಟಕ್ಕೆ ಸಂಚು ರೂಪಿಸಿದ್ದ ಉಗ್ರರು ತದನಂತರದಲ್ಲಿ ಹೈ ಸೆಕ್ಯುರಿಟಿ ಗಮನಿಸಿ ತಮ್ಮ ಯೋಜನೆ ಬದಲಾಯಿಸಿ ರಾಮಮಂದಿರ ಉದ್ಘಾಟನೆ ವೇಳೆ ಸಂಭ್ರಮಾಚರಣೆ ನಡೆಸಿದ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಿಸಲಾಯಿತ್ತೆಂದು ಎನ್ಐಎ ತನಿಖಾ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾರೆ.
ರಾಮೇಶ್ವರಂ ಕೆಫೆಯಲ್ಲೇ ಏಕೆ ಸ್ಫೋಟಿಸಲಾಯಿತ್ತೆಂದು ತನಿಖಾಧಿಕಾರಿಗಳು ಬಂಧಿತ ಇಬ್ಬರು ಉಗ್ರರನ್ನು ವಿಚಾರಣೆಗೊಳಪಡಿಸಿದಾಗ, ಮೊದಲು ವೈಟ್ ಫೀಲ್ಡ್ ನಲ್ಲಿ ದೊಡ್ಡ ದೊಡ್ಡ ಐಟಿ-ಬಿಟಿ ಕಂಪೆನಿಗಳಿವೆ. ಒಂದೊಂದು ಕಂಪೆನಿಗಳಲ್ಲಿ ಸಾವಿರಾರು ಮಂದಿ ಸಾಫ್ಟ್ ವೇರ್ ಎಂಜಿನಿಯರ್‌ಗಳು ಕೆಲಸ ಮಾಡುತ್ತಾರೆ. ಈ ಕಂಪೆನಿಗಳಲ್ಲಿ ಬಾಂಬ್ ಸ್ಫೋಟಿಸಿದರೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆಂದು ಆ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದೆವು.
ಆದರೆ ಆ ಪ್ರದೇಶದಲ್ಲಿ ಹೈಸೆಕ್ಯುರಿಟಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿ ಕ್ಯಾಮೆರಾಗಳು ಕಣ್ಗಾವಲಿದ್ದವು. ಮತ್ತು ಐಟಿ ಕಂಪೆನಿಯೊಳಗೆ ಹೋಗಲು ಡಿಟೆಕ್ಟರ್ ನಿಂದ ತಪಾಸಣೆ ಮಾಡಲಾಗುತ್ತದೆ. ಹಾಗಾಗಿ ತಾವು ಎಲ್ಲಿ ಸಿಕ್ಕಿಕೊಳ್ಳುತ್ತೇವೆಂಬ ಭಯದಲ್ಲಿ ಐಟಿ ಕಂಪೆನಿ ಸ್ಫೋಟಿಸುವ ಸಂಚನ್ನು ಕೈಬಿಟ್ಟೆವು ಎಂದು ವಿಚಾರಣೆಯಲ್ಲಿ ಬಂಧಿತ ಇಬ್ಬರು ಉಗ್ರರು ಸತ್ಯ ಹೇಳಿದ್ದಾರೆ.