ಹುಬ್ಬಳ್ಳಿ: ಯುಪಿಎಸ್‌ಸಿ ಪರೀಕ್ಷೆಯಲ್ಲಿ 440ನೇ ಸ್ಥಾನ ಪಡೆದ ಹುಬ್ಬಳ್ಳಿಯ ಕುಮಾರಿ ಕೃಪಾ ಜೈನ್ ಅವರ ಸಾಧನೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.
ಯುಪಿಎಸ್ಸಿಯಲ್ಲಿ ಈ ಸಾಧನೆ ತೋರುವ ಮೂಲಕ ಕೃಪಾ ಜೈನ್ ಅವರು ನಮ್ಮ ರಾಜ್ಯಕ್ಕೆ, ನಮ್ಮ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿಯ ಭಾರತಕ್ಕೆ ಯುಪಿಎಸ್ಸಿ ಸಾಧಕಿ ಕೃಪಾ ಜೈನ್ ಅವರ ಕೊಡುಗೆ ಅಮೋಘವಾಗಿರಲಿ ಮತ್ತು ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಪ್ರಹ್ಲಾದ ಜೋಶಿ ಆಶಿಸಿದ್ದಾರೆ.