ಸುದ್ದಿ

ಬೀರಲಿಂಗೇಶ್ವರ ದೇವಸ್ಥಾನದ 13ನೇ ವರ್ಷದ ಜಾತ್ರಾ ಮಹೋತ್ಸವ

Share It

ನವಲಗುಂದ: ಪಟ್ಟಣದ ಕುರುಬರ ಓಣಿಯ ಬೀರಲಿಂಗೇಶ್ವರ ದೇವಸ್ಥಾನದ 13 ವರ್ಷದ ಜಾತ್ರಾ ಮಹೋತ್ಸವದ ಅದ್ದೂರಿಯಾಗಿ ಜರುಗಿತು.

ಬೆಳಗ್ಗೆ ಬೀರಲಿಂಗೇಶ್ವರ ಮೂರ್ತಿಗೆ ಅಭಿಷೇಕ ಹಾಗೂ ಬಿಲ್ವಾರ್ಚನೆ ಕಾರ್ಯಕ್ರಮವು ಸಂಜೀವ ಹಿರೇಮಠ ನೇತೃತ್ವದಲ್ಲಿ ನಡೆಯಿತು. ನಂತರ ಬೀರಲಿಂಗೇಶ್ವರನ ಪಲ್ಲಕ್ಕಿ ಉತ್ಸವಕ್ಕೆ ಅಜಾತ ನಾಗಲಿಂಗಮಠದ ವೀರೇಂದ್ರ ಶ್ರೀಗಳು ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ವಿವಿಧ ಗ್ರಾಮಗಳ ಐದು ಪಲ್ಲಕ್ಕಿಗಳು ಸೇರಿದ್ದವು. ಪರಸ್ಥಳದಿಂದ ಐದಾರಕ್ಕೂ ಹೆಚ್ಚು ಡೊಳ್ಳಿನ ಮೇಳಗಳೊಂದಿಗೆ, ಬೀರಪ್ಪನಿಗೆ ಚವರ ಬಿಸುತ್ತ, ಯುವಕರು ಗುರುಹಿರಿಯರು ಏಳುಕೋಟಿ, ಏಳುಕೋಟಿಗೆ ಜೈಘೋಷ ಹಾಕುತ್ತ, ನೊಸಲಿಗೆ ಭಂಡಾರ ಹಚ್ಚುತ್ತಾ, ಎರಚುತ್ತಾ ಭಂಡಾ ರದಲ್ಲಿಯೇ ಮಿಂದೆದ್ದರು.

ಸುಮಂಗಲೆಯರಿಂದ ನಗರದ ಬೀದಿಗಳಲ್ಲಿ ಮೆರವಣಿಗೆ ಅತ್ಯಂತ ವೈಭವದಿಂದ ಹೊರಟು ನೀಲಮ್ಮ ಕೆರೆಯಲ್ಲಿ ಮುತ್ತೈದೆಯರಿಂದ ಹೊಳಿ ಪೂಜೆ ಜರುಗಿತು. ನಂತರ ವಿಧಿವಿಧಾನದಂತೆ ಮರಳಿ ದೇವಸ್ಥಾನಕ್ಕೆ ಹೊರಟು ಮಹಾ ಪೂಜೆಯೊಂದಿಗೆ ಬೀರಪ್ಪ ಮೂರ್ತಿಯನ್ನ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಯಿತು, ನಂತರ ಅನ್ನಪ್ರಸಾದ ಜರುಗಿತು.


Share It

You cannot copy content of this page