ಬೆಂಗಳೂರು: ಭಾನುವಾರ ಇಡೀ ದಿನ ಬರೀ ಅಪಘಾತ ಮತ್ತು ಸುದ್ದಿಯೇ ಕೇಳಿಬಂದಿದ್ದು, ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ ಭಾನುವಾರ ಒಂದೇ ದಿನ ರಾಜ್ಯಾಧ್ಯಂತ ನಡೆದ ಅಪಘಾತ ಪ್ರಕರಣದಲ್ಲಿ 51 ಸಾವು ಸಂಭವಿಸಿದೆ.
ರಾಜ್ಯದಲ್ಲಿ ರಸ್ತೆ ಸುರಕ್ಷತೆ ದೃಷ್ಟಿಯಿಂದ ಜನರಲ್ಲಿ ಜಾಗೃತ ಮನೋಭಾವನೆಯಿಲ್ಲ. ಇದು ಅಪಾಯಕಾರಿ ಅಪಘಾತಗಳಿಗೆ ಕಾರಣವಾಗುತ್ತವೆ, ವೇಗವಾದ ಚಾಲನೆ, ಕುಡಿತದ ಚಾಲನೆ, ಅಜಾಗೂರಕ ಚಾಲನೆ ಮೂಲಕ ತಮ್ಮ ಪ್ರಾಣವನ್ನು ಕಳೆದುಕೊಳ್ಳುವುದಲ್ಲದೇ, ಇತರರ ಪ್ರಾಣಕ್ಕೂ ವಾಹನ ಚಾಲಕರು ಕಂಟಕರಾಗುತ್ತಿದ್ದಾರೆ.
ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ನೆನ್ನೆ ನಡೆದ ಅಪಘಾತಗಳ ಬಗ್ಗೆ ಟ್ವೀಟ್ ಮಾಡಿದ್ದು, ರಾಜ್ಯದ ವಿವಿಧೆಡೆ ಸಂಭವಿಸಿದ ಅಪಘಾತಗಳ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ವೇಗ ಹಾಗೂ ಅಜಾಗರೂಕ ವಾಹನ ಚಾಲನೆ ಅಪಾಯಕಾರಿ ಎಂಬ ಅರಿವಿದ್ದರೂ ನಿರ್ಲಕ್ಷ್ಯದಿಂದಾಗಿ ಅಪಘಾತ, ಸಾವು-ನೋವು ಹೆಚ್ಚುತ್ತಿವೆ ಎಂದಿದ್ದಾರೆ.
ಕಳೆದ 24 ಗಂಟೆಗಳಯಲ್ಲಿ ಸುಮಾರು 51 ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಹಾಸನದಲ್ಲಿ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ 6 ಜನ ಸಾವಿ ಗೀಡಾಗಿದ್ದರು. ಚಿಕ್ಕೋಡಿ, ಉತ್ತರ ಕನ್ನಡ ಹಾಗೂ ರಾಮನಗರ ಸೇರಿ ರಾಜ್ಯದ ಹಲವೆಡೆ ಭೀಕರ ರಸ್ತೆ ಅಪಘಾತ ಸಂಭವಿಸಿವೆ. ಜತೆಗೆ ದೇಶದ ಹಲವು ಕಡೆಗಳಲ್ಲೂ ಅಪಘಾತಗಳು ನಡೆದು, ಹಲವರು ಪ್ರಾಣ ಕಳೆದುಕೊಂಡಿರುವುದು ವರದಿಯಾಗಿದೆ.