ಎಎಪಿ ಪಕ್ಷ ಹಾದಿ ತಪ್ಪಿದೆ . ಪಕ್ಷ ಸರಿಯಾದ ಮಾರ್ಗವನ್ನು ಅನುಸರಿಸಿದ್ದರೆ ಅವರು ಪಕ್ಷ ತೊರೆದು ಹೋಗುತ್ತಿರಲಿಲ್ಲ ಎಂದು ಅಣ್ಣಾ ಹಜಾರೆ ತಿಳಿಸಿದ್ದಾರೆ.
ಮುಂಬೈ : ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಮತ್ತು ಇತರೆ ಆರು ಸದಸ್ಯರು ಪಕ್ಷವನ್ನು ಮಾತ್ರ ತೊರೆಯಲಿಲ್ಲ. ಅವರು ಸರಿಯಾದ ಮಾರ್ಗ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅಭಿಪ್ರಾಯಪಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿಪ್ರಾಯ ಹೊಂದುವ ಹಕ್ಕಿದೆ.
ಎಎಪಿ ಪಕ್ಷ ಸರಿಯಾದ ಮಾರ್ಗವನ್ನು ಅನುಸರಿಸಿದ್ದರೆ, ಅವರು ಪಕ್ಷ ತೊರೆದು ಹೋಗುತ್ತಿರಲಿಲ್ಲ. ಅವರು ಎಎಪಿಯೊಳಗೆ ತೊಂದರೆಗಳನ್ನು ಎದುರಿಸಿರಬೇಕು. ಅದಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಎಲ್ಲವೂ ಸರಿ ಇದ್ದಿದ್ದರೆ, ಅವರು ಪಕ್ಷ ತೊರೆಯುತ್ತಿರಲಿಲ್ಲ ಎಂದರು.
ಎಎಪಿ ರಾಜ್ಯಸಭಾ ಸದಸ್ಯರಾದ ರಾಘವ್ ಚಡ್ಡಾ ಮತ್ತು ಸಂದೀಪ್ ಪಾಠಕ್ ಶುಕ್ರವಾರ ರಾಷ್ಟ್ರರಾಜಧಾನಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರುವುದಾಗಿ ಘೋಷಿಸಿದರು.
ಈ ವೇಳೆ ಮಾತನಾಡಿದ ಚಡ್ಡಾ, ಎಎಪಿಯ ಸುಮಾರು ಮೂರನೇ ಎರಡರಷ್ಟು ರಾಜ್ಯಸಭಾ ಸದಸ್ಯರು ಪಕ್ಷವನ್ನು ತೊರೆದಿದ್ದಾರೆ. ನಾವೀಗ ಪ್ರತ್ಯೇಕ ಬಣವಾಗಿ ಕಾರ್ಯನಿರ್ವಹಿಸಲಿರುವುದಾಗಿ ತಿಳಿಸಿದ್ದರು.
2012ರಲ್ಲಿ ರಚನೆಯಾದಾಗಿ ಎಎಪಿ ಪಕ್ಷದಲ್ಲಿ ರಾಘವ್ ಛಡ್ಡಾ ತುಂಬಾ ಶ್ರಮಿಸಿದ್ದರು , ಅವರ ಈ ನಿರ್ಧಾರದಿಂದ ಕೇಜ್ರಿವಾಲ್ ನೇತೃತ್ವದ ಪಕ್ಷಕ್ಕೆ ಗಮನಾರ್ಹ ಹಿನ್ನಡೆಯಾಗಿದೆ.

