ಅಪರಾಧ ರಾಜಕೀಯ

ಮಹಜರ್ ಗಾಗಿ ಬಿವಿಬಿ ಕಾಲೇಜು ಆವರಣಕ್ಕೆ ಫಯಾಜ್ ನನ್ನು ತಂದ ಸಿಐಡಿ

Share It

ಹುಬ್ಬಳ್ಳಿ: ಹಾಡಹಗಲೇ ನಗರದಲ್ಲಿ ಎಂ.ಸಿ.ಎ ವಿದ್ಯಾರ್ಥಿನಿ ನೇಹಾ ಹಿರೇಮಠ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಫಯಾಜ್ ವಶಕ್ಕೆ ಪಡೆದು ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಪೊಲೀಸರು ಆತನನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿದರು.

ಬಳಿಕ ಹತ್ಯೆ ನಡೆದ ಬಿವಿಬಿ ಕಾಲೇಜು ಆವರಣಕ್ಕೆ ಸ್ಥಳದ ಮಹಜರ್ ಗಾಗಿ ಕರೆತಂದರು. ಜೈಲಿಂದ ಹೊರತಂದಾಗ ಅವನ ಮುಖಕ್ಕೆ ಮಾಸ್ಕ್ ಹಾಕಲಾಗಿತ್ತು. ಆದರೆ, ಕಾಲೇಜು ಆವರಣಕ್ಕೆ ತಂದಾಗ ಮಾಸ್ಕ್ ಇರಲಿಲ್ಲ. ನೇಹಾ ಮೇಲೆ ಆಕ್ರಮಣ ಸ್ಥಳದಲ್ಲಿ ಫಯಾಜ್ ನ ಹೇಳಿಕೆಯನ್ನು ಸಿಐಡಿ ಅಧಿಕಾರಿಗಳು ದಾಖಲಿಸಿಕೊಂಡರು.

ನಂತರ ಆವರಣದ ಮತ್ತೊಂದು ಭಾಗದಲ್ಲೂ ಅಧಿಕಾರಿಗಳು ಅವನ ವಿಚಾರಣೆ ನಡೆಸಿದರು. ಆವರಣದ ಒಳಗೆ ಮಹಜರ್ ನಡೆಯುತ್ತಿದ್ದರೆ ಹೊರಗಡೆ ಎಬಿವಿಪಿ ಸದಸ್ಯರು ಗುಂಪುಗೂಡಿ ಗಲ್ಲಿಗೇರಿಸಿ, ಗಲ್ಲಿಗೇರಿಸಿ, ಫಯಾಜ್ ನ್ನು ಗಲ್ಲಿಗೇರಿಸಿ, ನೇಹಾ ಹಿರೇಮಠಗೆ ನ್ಯಾಯ ದೊರಕಿಸಿ ಅಂತ ಘೋಷಣೆಗಳನ್ನು ಕೂಗುತ್ತಿದ್ದರು.

ಸದ್ಯ ಈ ಪ್ರಕರಣವನ್ನು 4 ತಿಂಗಳ ಅವಧಿಯಲ್ಲಿ ಇತ್ಯರ್ಥಗೊಳಿಸುವ ಭರವಸೆಯನ್ನು ಸಿದ್ದರಾಮಯ್ಯ ಸರ್ಕಾರ ನಿರಂಜನ್ ಹಿರೇಮಠ ಅವರ ಕುಟುಂಬಕ್ಕೆ ನೀಡಿದೆ.


Share It

You cannot copy content of this page