ಉಪಯುಕ್ತ ಸುದ್ದಿ

ಯುಜಿಸಿಇಟಿ ವೈದ್ಯಕೀಯ ತಪಾಸಣೆ ಪ್ರಕ್ರಿಯೆ ಮುಂದೂಡಿಕೆ

Share It

ಬೆಂಗಳೂರು: ಯುಜಿಸಿಇಟಿ ವಿಶೇಷಚೇತನ ಅಭ್ಯರ್ಥಿಗಳ ವೈದ್ಯಕೀಯ ತಪಾಸಣಾ ಪ್ರಕ್ರಿಯೆಯನ್ನು ಮೊದಲ ಹಂತದ ಲೋಕಸಭಾ ಚುನಾವಣೆ ಮತದಾನದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.

ವೈದ್ಯಕೀಯ ತಪಾಸಣೆಯ ಹೊಸ ದಿನಾಂಕಗಳನ್ನು ಶೀಘ್ರದಲ್ಲಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಮೂಲಕ ತಿಳಿಸಿದೆ. ಯುಜಿಸಿಇಟಿ-೨೪ರ ವಿಶೇಷಚೇತನ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ಏ.೨೫ ಮತ್ತು ೨೬ ರಂದು ನಡೆಯಬೇಕಿತ್ತು.

ಮತದಾನದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಿದ್ದು, ಮುಂದಿನ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದೆ.


Share It

You cannot copy content of this page