ಬೆಂಗಳೂರು: ವಿಜಯ್ ದೇವರಕೊಂಡ ನಟನೆಯ ದಿ ಫ್ಯಾಮಿಲಿ ಸ್ಟಾರ್ ಚಿತ್ರ ಒಟಿಟಿ ಫ್ಲಾಟ್‌ಫಾರ್ಮ್ನಲ್ಲಿ ಬರಲಿದ್ದು, ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ.
ಈ ಕುರಿತು ಅಮೇಜಾನ್ ಪ್ರೈಮ್ ವಿಡಿಯೋ ಸಂಸ್ಥೆ ಅಧಿಕೃತ ಪ್ರಕಟಣೆ ನೀಡಿದ್ದು, ಪರುಶುರಾಮ್ ಬರೆದು ನಿರ್ದೇಶಿಸಿರುವ ದಿ ಫ್ಯಾಮಿಲಿ ಸ್ಟಾರ್ ಸಿನಿಮಾ ಏ.೫ ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತ್ತು.
ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲಿ ಡಬ್ಬಿಂಗ್ ಆಗಿ ಬಿಡುಗಡೆಯಾಗಲಿರುವ ದಿ ಫ್ಯಾಮಿಲಿ ಸ್ಟಾರ್ ಸಿನಿಮಾ ಭಾರತ ಸೇರಿದಂತೆ ೨೪೦ ದೇಶ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಸಾರವಾಗಲಿದೆ.
ಸಿನಿಮಾ ಬಿಡುಗಡೆಯಾಗಿ ೨೦ ದಿನಗಳಲ್ಲೇ ಒಟಿಟಿಗೆ ಬರಲು ಸಜ್ಜಾಗಿದ್ದು, ಚಿತ್ರಮಂದಿರಗಳಲ್ಲಿ ಅಷ್ಟೊಂದು ಯಶಸ್ಸು ಕಂಡಿರಲಿಲ್ಲ. ವಿಜಯ್ ದೇವರಕೊಂಡ ಅಭಿನಯದ ಈ ಹಿಂದಿನ ಚಿತ್ರಗಳಾದ ಲೈಗರ್, ಖುಷಿ ಚಿತ್ರಗಳು ಕೂಡ ಅಷ್ಟೇನು ಸದ್ದು ಮಾಡಿರಲಿಲ್ಲ. ಇದೀಗ ದಿ ಫ್ಯಾಮಿಲಿ ಸ್ಟಾರ್ ಕೂಡ ಅದೇ ಹಾದಿ ಹಿಡಿದಿದೆ. ಆದರೆ, ಒಟಿಟಿಯಲ್ಲಿ ಯಶಸ್ಸು ಕಾಣುತ್ತದೆಯೋ ಏನೋ ಕಾದು ನೋಡಬೇಕಿದೆ.