ತಮ್ಮ ನೈಜ ಸೌಂದರ್ಯದಿಂದಲೇ ಮನೆಮಾತಾಗಿರುವ ಸ್ಯಾಂಡಲ್ ವುಡ್ ನಟಿ ಅಂದ್ರೆ ರುಕ್ಮಿಣಿ ವಸಂತ್. ಸಧ್ಯ ಕನ್ನಡ ಚಿತ್ರರಂಗದಲ್ಲಿ ಫುಲ್ ಬ್ಯುಸಿ ಆಗಿರುವ ನಟಿ ರುಕ್ಮಿಣಿ ಇದೀಗ ‘ಬಘೀರ’ ಚಿತ್ರದಲ್ಲಿನ ಅವರ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಹೊರಬಿದ್ದಿದೆ.
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬಳಿಕ ಜನಪ್ರಿಯತೆ ಪಡೆದಿರುವ ನಟಿ ರುಕ್ಮಿಣಿ, ಇದೀಗ ಶ್ರೀ ಮುರಳಿ ಅಭಿನಯದ ‘ಬಘೀರ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ರುಕ್ಮಿಣಿ ವಸಂತ್ ನಟನೆಯ ಸನ್ನಿವೇಶಗಳ ಚಿತ್ರೀಕರಣ ಈಗಾಗಲೇ ಮುಗಿದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ಮೂಲಕ ಸಪ್ತ ಸಾಗರದಾಚೆ ಎಲ್ಲೋ ಬಳಿಕ ಮತ್ತೊಂದು ಬಿಗ್ ಪ್ರಜೆಕ್ಟ್ ನಲ್ಲಿ ರುಕ್ಮಿಣಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ವಿಶೇಷ ಅಂದ್ರೆ ಈ ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಕಥೆ ಹೆಣೆದಿದ್ದಾರೆ.
ತಮಿಳು ಸಿನಿಮಾದಲ್ಲೂ ರುಕ್ಮಿಣಿ ವಸಂತ್ ನಟಿಸುತ್ತಿದ್ದು, ವಿಜಯ್ ಸೇತುಪತಿ ಜೊತೆ ಏಸ್ ಚಿತ್ರದಲ್ಲಿ ಲೀಡ್ ರೋಲ್ ನಲ್ಲಿ ರುಕ್ಮಿಣಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಚಿತ್ರ ರಿಲೀಸ್ ಸಹ ರಿಲೀಸ್ ಆಗಲಿದೆ ಎಂಬ ಮಾಹಿತಿ ಇದೆ. ಇದರ ಜೊತೆಗೆ ತಮಿಳಿನ ನಟ ಶಿವ ಕಾರ್ತಿಕೇಯನ್‌ಗೆ ಜೋಡಿಯಾಗಿ ಸಹ ರುಕ್ಮಿಣಿ ನಟಿಸಿದ್ದಾರೆ. ಈ ಚಿತ್ರ ಕೂಡ ವರ್ಷದ ಅಂತ್ಯದಲ್ಲಿ ಬೆಳ್ಳಿ ಪರದೆಗೆ ಅಪ್ಪಳಿಸಲಿದೆ.
ಸೌತ್ ಸಿನಿಮಾಗಳ ಜೊತೆ ಕನ್ನಡದ ಭೈರತಿ ರಣ್‌ಗಲ್ ಚಿತ್ರದಲ್ಲಿ ಶಿವಣ್ಣಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಇನ್ನೂ ಕುತೂಹಲಕಾರಿ ಸಂಗತಿ ಅಂದ್ರೆ ಕಾಂತಾರ ಚಾಪ್ಟರ್-೧ರಲ್ಲಿ ರುಕ್ಮಿಣಿ ನಾಯಕಿಯಾಕಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಸಹ ಕೇಳಿ ಬರುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆಯೊಂದೆ ಬಾಕಿ ಎನ್ನಲಾಗುತ್ತಿದೆ. ಈ ಮೂಲಕ ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ರುಕ್ಮಿಣಿ ವಸಂತ್ ಫುಲ್ ಬ್ಯುಸಿಯಾಗಿದ್ದು, ಬ್ಯಾಕ್ ಟು ಬ್ಯಾಕ್ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.