ಡಾ.ಅಂಬೇಡ್ಕರ್ ಅವರನ್ನು ಮಹಾತ್ಮಾ ಎಂದು ಕರೆಯಬೇಕು:ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ:
ನಾವು ಇನ್ನು ಮುಂದೆ ಅಂಬೇಡ್ಕರ್ ಅವರನ್ನೂ ಮಹಾತ್ಮಾ ಅಂಬೇಡ್ಕರ್ ಎಂದು ಕರೆಯಬೇಕು. ಸಂವಿಧಾನದ ಮಾರ್ಗದಲ್ಲಿ ನಡೆಯುವುದೇ ನಾವು ದೇಶಕ್ಕೆ ಕೊಡುವ ಗೌರವ. ಚುನಾವಣೆ ಬಂದೆ ಬರುತ್ತವೆ. ಸಂವಿಧಾನ, ಅಂಬೇಡ್ಕರ್ ವಿಚಾರದಲ್ಲಿ ನಾವೆಲ್ಲರೂ ಒಂದೇ ಎನ್ನುವ ಸಂದೇಶ ಸಾರಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅಂಬೇಡ್ಕರ್ ಜಯಂತಿ ಅಂಗವಾಗಿ ಹುಬ್ಬಳ್ಳಿಯಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಎಲ್ಲರೂ ಒಕ್ಕಟ್ಟಾಗಿ ನಿಂತು ಮಾತನಾಡುವಂತೆ ಮಾಡಿದ್ದೇ ಅಂವೇಡ್ಕರ್ ಶಕ್ತಿ. ಇಡಿ ದೇಶವನನ್ನು ಪ್ರಜಾಪ್ರಭುತ್ವ ವ್ಯಾಪ್ತಿಗೆ ತಂದಿರುವುದು ಅಂಬೇಡ್ಕರ್ ಅವರು. ಸ್ವಾತಂತ್ರ್ಯವನ್ನು ಹೇಗೆ ನಿರ್ವಹಿಸಬೇಕು ಎನ್ನುವುದು ನಮಗೆ ಗೊತ್ತಿರಲಿಲ್ಲ. ಅಂಬೇಡ್ಕರ್ ಅವರು ಅದಕ್ಕೆ ಒಂದು ನಿತಿ ರೂಪಿಸಿ ಚೌಕಟ್ಟು ಹಾಕಿ ಸಂವಿಧಾನ ರೂಪಿಸಿದರು. ಇಂದಿಗೂ ಅಂಬೇಡ್ಕರ್ ಚಿಂತನೆ ಪ್ರಸ್ತುತ ಇದೆ. ಇಡಿ ವಿಶ್ವದ ಅತ್ಯಂತ ಶ್ರೇಷ್ಠ ಸಂವಿದಾನ ಅಂಬೇಡ್ಕರ್ ನೀಡಿದ್ದಾರೆ. ಅನೇಕ ದೇಸಶಗಳ ಸಂವಿಧಾನ ವಿಫಲವಾಗಿವೆ ಎಂದರು.
ಸರ್ಕಾರಗಳು ಬದಲಾಗಬಹುದು ಅವುಗಳ ಬದಲಾವಣೆ ಶಾಂತವಾಗಿ ಆಗುವಂತೆ ಮಾಡಿದ್ದು ಅಂಬೇಡ್ಕರ್ ಅವರು,
ಸಂವಿಧಾನವನ್ನು ಸದಾಕಾಲ ಜೀವಂತವಾಗಿಟ್ಟಿದ್ದಾರೆ. ಬದಲಾದ ಪರಿಸ್ಥಿತಿಗೆ ಉತ್ತರ ಕೊಡಲು ಸಂವಿಧಾನದಲ್ಲಿ ಅವಕಾಶ ಇಟ್ಟಿದ್ದಾರೆ. ಸಾಮಾಜಿಕವಾಗಿ ದೇಶದ ಬಗ್ಗೆ ಚಿಂತನೆ ಮಾಡಿ ಸಂಘಟನೆ, ಶಿಕ್ಷಣದ ಮಹತ್ವ ಹೇಳಿಕೊಟ್ಟಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ, ಮಾಜಿ ಸಂಸದ ಐ ಜಿ ಸನದಿ ಹಾಗೂ ಮತ್ತಿತರ ದಲಿತ ಮುಖಂಡರು ಹಾಜರಿದ್ದರು.