ಕನ್ನಡ ಚಿತ್ರರಂಗದ ದಂತಕತೆ ಡಾ ರಾಜ್ಕುಮಾರ್ (Dr Rajkumar) ಅವರ ಪುಣ್ಯ ಜಯಂತಿ ಇಂದು (ಏಪ್ರಿಲ್ 24). ಅಣ್ಣಾವ್ರು ಬದುಕಿದ್ದಿದ್ದರೆ ಇಂದಿಗೆ ಅವರಿಗೆ 97 ವರ್ಷ ವಯಸ್ಸಾಗಿರುತ್ತಿತ್ತು. ಪ್ರತಿ ವರ್ಷದಂತೆ ರಾಜ್ಯದ ಹಲವಾರು ಕಡೆ ಇಂದು ಅಣ್ಣಾವ್ರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ರಾಜರಾಜೇಶ್ವರಿ ನಗರದಲ್ಲಿರುವ ಅಣ್ಣಾವ್ರ ಸಮಾಧಿಗೆ ಭೇಟಿ ನೀಡಿದ ಅಣ್ಣಾವ್ರ ಪುತ್ರ ರಾಘವೇಂದ್ರ ರಾಜ್ಕುಮಾರ್ ಮತ್ತು ಅವರ ಕುಟುಂಬದವರು ಸಮಾಧಿಗೆ ಪೂಜೆ ಮಾಡಿದರು.

