ಕ್ರೀಡೆ ಸುದ್ದಿ

ರನ್ ಔಟ್ ಆಗದ ಡು-ಪ್ಲೆಸಿಸ್ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದು ಹೀಗೆ..!

Share It

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಳೆದ ರಾತ್ರಿ ಮಳೆಯ ತೀವ್ರ ಆತಂಕದ ನಡುವೆ ನಡೆದ ಅತಿ ಮಹತ್ವದ ಮತ್ತು ರೋಚಕ ನಿರ್ಣಾಯಕ ಐಪಿಎಲ್ ಪಂದ್ಯದಲ್ಲಿ ಆತಿಥೇಯ ಆರ್.ಸಿ.ಬಿ ತಂಡವು ಸಿ.ಎಸ್.ಕೆ ತಂಡವನ್ನು 27 ರನ್ ಗಳಿಂದ ಸೋಲಿಸಿತು‌. ಈ ಮೂಲಕ 4ನೇ ತಂಡವಾಗಿ ಆರ್.ಸಿ.ಬಿ ತಂಡ ಪ್ಲೇ ಆಫ್ ಸುತ್ತು ತಲುಪಿತು.

ಆದರೆ ಈ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 78 ರನ್​ ಕಲೆಹಾಕಿದ ಬಳಿಕ ವಿರಾಟ್ ಕೊಹ್ಲಿ (47 ರನ್) ಔಟಾದರು. ಇದರ ಬೆನ್ನಲ್ಲೇ ಅರ್ಧಶತಕ ಬಾರಿಸಿ ಡುಪ್ಲೆಸಿಸ್ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು.

ಆದರೆ ಮಿಚೆಲ್ ಸ್ಯಾಂಟ್ನರ್ ಎಸೆದ 13ನೇ ಓವರ್​ನ ಕೊನೆಯ ಎಸೆತದಲ್ಲಿ ರಜತ್ ಪಾಟಿದಾರ್ ಸ್ಟ್ರೈಟ್ ಡ್ರೈವ್ ಶಾಟ್ ಬಾರಿಸಿದ್ದರು. ಚೆಂಡು ಸ್ಯಾಂಟ್ನರ್ ಕೈಗೆ ತಾಗಿ ನಾನ್ ಸ್ಟ್ರೈಕರ್ ಸ್ಟಂಪ್​ಗೆ ಬಡಿಯಿತು. ಅತ್ತ ನಾನ್​ ಸ್ಟ್ರೈಕರ್ ಎಂಡ್​ನಲ್ಲಿದ್ದ ಫಾಫ್ ಡುಪ್ಲೆಸಿಸ್ ತಕ್ಷಣವೇ ಬ್ಯಾಟ್​ ಅನ್ನು ಕ್ರೀಸ್​ನಲ್ಲಿಟ್ಟಿದ್ದರು.

ಆದರೆ ಮಿಚೆಲ್ ಸ್ಯಾಂಟ್ನರ್ ಎಸೆದ 13ನೇ ಓವರ್​ನ ಕೊನೆಯ ಎಸೆತದಲ್ಲಿ ರಜತ್ ಪಾಟಿದಾರ್ ಸ್ಟ್ರೈಟ್ ಡ್ರೈವ್ ಶಾಟ್ ಬಾರಿಸಿದ್ದರು. ಚೆಂಡು ಸ್ಯಾಂಟ್ನರ್ ಕೈಗೆ ತಾಗಿ ನಾನ್ ಸ್ಟ್ರೈಕರ್ ಸ್ಟಂಪ್​ಗೆ ಬಡಿಯಿತು. ಅತ್ತ ನಾನ್​ ಸ್ಟ್ರೈಕರ್ ಎಂಡ್​ನಲ್ಲಿದ್ದ ಫಾಫ್ ಡುಪ್ಲೆಸಿಸ್ ತಕ್ಷಣವೇ ಬ್ಯಾಟ್​ ಅನ್ನು ಕ್ರೀಸ್​ನಲ್ಲಿಟ್ಟಿದ್ದರು.

ಅತ್ತ ಮಿಚೆಲ್ ಸ್ಯಾಂಟ್ನರ್ ಮನವಿ ಸಲ್ಲಿಸುತ್ತಿದ್ದಂತೆ ಫೀಲ್ಡ್ ಅಂಪೈರ್ ಥರ್ಡ್ ಅಂಪೈರ್​ಗೆ ರಿಪ್ಲೇ ಪರಿಶೀಲಿಸುವಂತೆ ಮನವಿ ಮಾಡಿದರು. ಅದರಂತೆ ರಿಪ್ಲೇ ಪರಿಶೀಲಿಸಿದ ಟಿವಿ ಅಂಪೈರ್ ಫಾಫ್ ಡುಪ್ಲೆಸಿಸ್ ರನೌಟ್ ಎಂದು ತೀರ್ಪು ನೀಡಿದರು. ಅತ್ತ ಮಿಚೆಲ್ ಸ್ಯಾಂಟ್ನರ್ ಮನವಿ ಸಲ್ಲಿಸುತ್ತಿದ್ದಂತೆ ಫೀಲ್ಡ್ ಅಂಪೈರ್ ಥರ್ಡ್ ಅಂಪೈರ್​ಗೆ ರಿಪ್ಲೇ ಪರಿಶೀಲಿಸುವಂತೆ ಮನವಿ ಮಾಡಿದರು. ಅದರಂತೆ ರಿಪ್ಲೇ ಪರಿಶೀಲಿಸಿದ ಟಿವಿ ಅಂಪೈರ್ ಫಾಫ್ ಡುಪ್ಲೆಸಿಸ್ ರನೌಟ್ ಎಂದು ತೀರ್ಪು ನೀಡಿದರು.

ಆದರೆ ಚೆಂಡು ವಿಕೆಟ್​ಗೆ ಬಡಿಯುವ ಮುನ್ನವೇ ಫಾಫ್ ಡುಪ್ಲೆಸಿಸ್​ ಬ್ಯಾಟ್​ ಅನ್ನು ಕ್ರೀಸ್​ನಲ್ಲಿಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇದಾಗ್ಯೂ ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದರಿಂದ ಖುದ್ದು ಫಾಫ್ ಡುಪ್ಲೆಸಿಸ್ ಆಶ್ಚರ್ಯಚಕಿತರಾದರು. ಅತ್ತ ಅಭಿಮಾನಿಗಳು ಕೂಡ ಅಚ್ಚರಿಗೊಂಡರು.
ಆದರೆ ಚೆಂಡು ವಿಕೆಟ್​ಗೆ ಬಡಿಯುವ ಮುನ್ನವೇ ಫಾಫ್ ಡುಪ್ಲೆಸಿಸ್​ ಬ್ಯಾಟ್​ ಅನ್ನು ಕ್ರೀಸ್​ನಲ್ಲಿಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇಷ್ಟಾದರೂ ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದರಿಂದ ಖುದ್ದು ಫಾಫ್ ಡುಪ್ಲೆಸಿಸ್ ಆಶ್ಚರ್ಯಚಕಿತರಾದರು. ಅತ್ತ ಅಭಿಮಾನಿಗಳು ಕೂಡ ಅಚ್ಚರಿಗೊಂಡರು.

ಈ ಅಂಪೈರ್ ತೀರ್ಪಿನ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ಸಿಎಸ್​ಕೆ ಫಿಕ್ಸರ್ ಎಂಬ ಹ್ಯಾಶ್​ ಟ್ಯಾಗ್​ ಟ್ರೆಂಡ್ ಆದವು. ಇದಾಗ್ಯೂ ಅಂತಿಮವಾಗಿ ಈ ಪಂದ್ಯದಲ್ಲಿ ಆರ್​ಸಿಬಿ 27 ರನ್​ಗಳ ಜಯ ಸಾಧಿಸಿ ಪ್ಲೇಆಫ್​ ಹಂತಕ್ಕೇರುವಲ್ಲಿ ಯಶಸ್ವಿಯಾಗಿದೆ.

ಈ ಅಂಪೈರ್ ತೀರ್ಪಿನ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾದವು. ಅದರಲ್ಲೂ ಸಿಎಸ್​ಕೆ ಫಿಕ್ಸರ್ ಎಂಬ ಹ್ಯಾಶ್​ ಟ್ಯಾಗ್​ ಟ್ರೆಂಡ್ ಆದವು. ಇದಾಗ್ಯೂ ಅಂತಿಮವಾಗಿ ಈ ಪಂದ್ಯದಲ್ಲಿ ಆರ್​ಸಿಬಿ 27 ರನ್​ಗಳ ಜಯ ಸಾಧಿಸಿ ಪ್ಲೇಆಫ್​ ಹಂತಕ್ಕೇರುವಲ್ಲಿ ಯಶಸ್ವಿಯಾಯಿತು.

ಅಂತಿಮವಾಗಿ ಮ್ಯಾನ್ ಆಫ್ ದಿ ಮ್ಯಾಚ್ ಸಹಜವಾಗಿ ಆರ್.ಸಿ.ಬಿ ನಾಯಕ ಡು-ಪ್ಲೆಸಿಸ್ ಅವರಿಗೆ ಸಿಕ್ಕಿತು. ಇದರಿಂದ 3ನೇ ಅಂಪೈರ್ ಮಾಡಿದ್ದ ತಪ್ಪನ್ನು ಕ್ಷಮಿಸಿ ಎಂದು ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಸಹಜವಾಗಿ ಮೋಸ ಹೋದ ಬ್ಯಾಟ್ಸ್ ಮನ್ ತಥಾ ಆರ್.ಸಿ.ಬಿ ನಾಯಕ ಡುಪ್ಲೆಸಿಸ್ ಅವರಿಗೆ ನೀಡಲಾಯಿತು.


Share It

You cannot copy content of this page