ರಾಜಕೀಯ ಸುದ್ದಿ

ರಾಯಚೂರು: ಮತಗಟ್ಟೆಗಳಿಗೆ ಸಹಾಯಕ ಚುನಾವಣೆ ಅಧಿಕಾರಿ ಪ್ರಕಾಶ್ ಭೇಟಿ

Share It

ಕವಿತಾಳ, ಏ19: ಮೇ 7ರಂದು ನಡೆಯುವ ರಾಯಚೂರು ಲೋಕಸಭಾ ಚುನಾವಣೆಯ ಮತದಾನ ಕೇಂದ್ರಗಳಿಗೆ ಸಹಾಯಕ ಚುನಾವಣಾ ಅಧಿಕಾರಿ ಪ್ರಕಾಶ್ ಅವರು ಗುರುವಾರ ಭೇಟಿ ನೀಡಿದರು.

ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣಕ್ಕೆ ಮಾನ್ವಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಪ್ರಕಾಶ್, ಸಿರವಾರ ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೆರಾ ಹಾಗೂ ಕಂದಾಯ ಸಿಬ್ಬಂದಿಗಳು, ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದು ಮತಗಟ್ಟೆ ಕೇಂದ್ರ ಸಿದ್ಧತೆ ಕುರಿತು ಪರಿಶೀಲನೆಯನ್ನು ಮಾಡಿದರು. ವಿಶೇಷವಾಗಿ ಭಾಗ ಸಂಖ್ಯೆ 77 ಅನ್ನು ಸಖಿ ಮತಗಟ್ಟೆ ಎಂದು ಆಯ್ಕೆ ಮಾಡಿಕೊಂಡಿದ್ದು ಮಹಿಳಾ ಮತದಾರರನ್ನು ಸೆಳೆಯಲು ಮಹಿಳಾ ಮತದಾರರು ಹೆಚ್ಚಿರುವ ಭಾಗ ಸಂಖ್ಯೆಯನ್ನು ಆಯ್ಕೆ ಮಾಡಿಕೊಂದಿದ್ದು ಅದರ ಸಿದ್ಧತೆಯನ್ನು ಪರಿಶೀಲಿಸಿ ತಯಾರಿ ಮಾಡಿಕೊಳ್ಳುವ ಬಗ್ಗೆ ನಿರ್ದೇಶನ ನೀಡಿದರು.

ಸಖಿ ಮತಗಟ್ಟೆ ಅಥವಾ ಪಿಂಕ್ ಬೂತ್ ಎಂದು ಗುರುತಿಸಿದ್ದು ಇದಕ್ಕೆ ಪಿಂಕ್ ಬಣ್ಣವನ್ನು ಹಚ್ಚಿ ಹೊರಗಡೆ ಆಕರ್ಷಣೆ ಮಾಡಲು ಬ್ಯಾನರ್ ಕಟೌಟ್ ಗಳನ್ನು ಹಾಕಲು ಸೂಚಿಸಿದರು ಮತ್ತು ಸಖಿ ಮತಗಟ್ಟೆಗೆ ಬರುವ ಎಲ್ಲಾ ಚುನಾವಣೆ ಸಿಬ್ಬಂದಿಗಳು ಮಹಿಳೆಯರೇ ಇದ್ದು ಒಂದೇ ಬಣ್ಣದ ವಸ್ತ್ರಗಳನ್ನು ಧರಿಸಿ ಕರ್ತವ್ಯ ನಿರ್ವಹಿಸುವುದು ವಿಶೇಷವಾಗಿರುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜೆಇ ನರಸಮ್ಮ, ಕಂದಾಯ ನಿರೀಕ್ಷಕರು ಕೆ. ಮಲ್ಲಿಕಾರ್ಜುನ್ , ಆಡಳಿತ ಅಧಿಕಾರಿ ಸದಾಕಲಿ, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಘವೇಂದ್ರ, ಶಾಲೆಯ ಮುಖ್ಯೋಪಾಧ್ಯಾಯ ಸಂಗಪ್ಪ, ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.


Share It

You cannot copy content of this page