ಅಪರಾಧ ರಾಜಕೀಯ ಸುದ್ದಿ

ಎಲ್ಲಿದ್ದಿಯಪ್ಪ ಪ್ರಜ್ವೊಲ್ಲು…..ಫ್ಯಾಮಿಲಿ ಕಾಯ್ತಾವ್ರೆ ಬಾ

Share It


ಹಾಸ್ನದ್ ಪ್ಯಾಟೆ ಬೀದಿಲೆಲ್ಲ, ಪೆನ್ ಡ್ರೈವ್, ಪೆನ್ ಡ್ರೈವ್ ಅನ್ನೋ ಸೌಂಡ್ ಬತ್ತಿತ್ತು. ಇದೇನ್ ತಡಿ, ಯಾವ್ದೋ ಹೊಸ ಮಾಲ್ ಬಂದಿರಂಗದೆ ಅಂತೆ ತಿರುಗ್ ನೋಡುದ್ರೆ, ಪಡವಲ್ ಕಾಯಿ, ಪಾಲಾಕ್ ಸೊಪ್ಪು ಅಂತ ಕೂಗ್ತಿದ್ರು, ನಂಗ್ ಯಾಕ್ ಹಂಗ್ ಕೇಳುಸ್ತು ಅಂತ ನೋಡಿದ್ರೆ, ನಾನ್ ಪೆನ್ ಡ್ರೈವ್ ಗುಂಗಲ್ಲಿದ್ದದ್ದಕ್ಕೆ ಹಂಗೆ ಕೇಳ್ಸದೆ ಅಂದ್ಕಂಡ್ ಹಳೇ ಬಸ್ಟಾಂಡ್ ಕಡೀಕ್ ಬಂದೆ.

ಕಟ್ಟಾಯದ್ ಕಡೆ ಕಟ್ಟ ಕಡೆ ಊರಿನ್ ಗೌಡ್ರೊಬ್ರು, ಬಸ್‌ಸ್ಟಾಂಡ್‌ನ ಆಚೆ ಗೋಡಿಗ್ ಹೊರಿಕಂಡು, ಮೋಟ್ ಬೀಡಿ ಸೇದ್ಕಂತ ಕೂತಿದ್ರು, ನೋಡಿ ನಮಸ್ಕಾರ ಗೋಡ್ರೆ ಅಂತಿದ್ದಂತೆ, ಬೀಡಿನಾ ನೆಲಕ್ಕಾಗಿ ತೀಡೋಕ್ ಸುರು ಮಾಡ್ಕಂಡ್ರು, ಇರ‍್ಲಿ, ಸೇದಿ ಗೋಡ್ರೆ, ಅದ್ಯಾಕ್ ಅರ್ಧಕ್ಕೆ ಹಾರಿಸ್ಬುಟ್ರಿ ಅಂದೆ.

ನಾನೆಲ್ಲೋ ಪೊಲೀಸ್ನೋರು ಅಂದ್ಕಂಡ್ಡೆ ಕಣಪ್ಪ, ಪೋಲೀಸ್ನೋರು ಬೀಡಿ ಸೇದಿದ್ರೆ ದಂಡ ಹಾಕ್ತರಂತೆ ಅಂತ ಹೇಳ್ತಿದ್ರಲ್ಲ ಅದ್ಕೆ ಹಂಗ್ ಮಾಡ್ದೆ ಅಂದ್ರು ಗೋಡ್ರು, ಬುಡಿ ಗೋಡ್ರೆ, ಈಗ ಪೊಲೀಸ್ನೋರೆಲ್ಲ ಪೆನ್ ಡ್ರೈವ್, ಸೀಡಿ ಹುಡುಕೋ ಬ್ಯೂಸಿಯಾಗ್ ಅವ್ರೆ, ಅವ್ರಿಗೆ ಬೀಡಿಯೆಲ್ಲ ಹುಡ್ಕೋ ಟೇಮೆಲ್ಲೈತೆ, ಅಂದಂಗೆ ಹೆಂಗಾತು ಎಲೆಕ್ಷನ್ನು ಅಂದೆ.

ಹೆಂಗೋ ಆಯ್ತು ಕಣ್ ಬಾ ಮಗಾ, ಆರಕ್ಕೆರ‍್ಲಿಲ್ಲ, ಮೂರಕ್ಕಿಳಿಲಿಲ್ಲ, ಯಾರ್ ಬಂದ್ರೆ ನಮ್ಗೇನು ಗೇಮೆ ಮಾಡದ್ ತಪ್ಪಾಕಿಲ್ಲ, ಆದ್ರೂ, ದೊಡ್ಡ್ ಗೌಡ್ರು ಮೊಮ್ಮಗ ಹಿಂಗೆಲ್ಲ ಮಾಡ್ಬಾರದಿತ್ತು, ಈಗ ಯಾವನೂ ಏನ್ ಸಾಚ ಇರಕ್ಕುಲ್ಲ ಕಣ್ ಬುಡು, ದುಡ್ಡಿರೋರ್ ಮಕ್ಳು ಅಂದ್ರೆ ವಸಿ ಹಾದಿ ತಪ್ಪದ್ ದಿಡ್ವೆಯಾ ಆದ್ರೆ, ಈಟೊಂದ್ ಹಾದಿ ತಪ್ಪಿದ್ರೆ, ನಮ್ ಗೌಡ್ರು ಗತಿ ಏನ ಹೇಳು ಅಂತ ಪಾಪಪ್ರಜ್ಞೆ ಸುರು ಮಾಡ್ಕೊಂಡ್ರು ಗೋಡ್ರು,

ಸಣ್ಣ ಗೌಡ್ರಿಗಿರೋ ದೊಡ್ಡಗೌಡ್ರು ಮ್ಯಾಗಿನ್ ಕಾಳಜಿ ನೋಡಿ ನಂಗೂ ಸ್ವಲ್ಪ ಕುತೂಹಲ ಆಯ್ತು, ಅದ್ಯಾಕಂಗAದಿರಿ, ಏನಾಯ್ತು ಅಂದೆ, ಅದೆಂತದ್ದೋ ಇಡೀಯೋ ಎಲ್ಲ ಬಂದವಲ್ಲಪ್ಪ, ಮನೆಮನೆಲ್ ಸಣ್ಣ ಹುಡ್ಲೆಲ್ಲ ನೋಡ್ಕಂಡು, ಅವ್ರಿಗ್ ವೋಟ್ ಹಾಕ್ಬಾö್ಯಡ್ರಿ ಕಣಪ್ಪೋ ಅಂತಾವೆ, ಅಲ್ ಕಣ್ರೋ ದೇಸಕ್ಕೊಬ್ರನೆ ಪ್ರದಾನಿ, ಆಯಪ್ಪನ್ ಬುಟ್ಟು ನಾವೆಲ್ಲಿಗೋಗನೆ ಅಂದ್ರೆ, ನೋಡಿಲ್ಲಿ ಅಂತ ಪೊಲೀ ಹುಡ್ಲು ನನ್ ಮಕತ್ತಕ್ ಹಿಡಿತಾವೆ, ನಾನ್ ಯಾವ್ ಬಾಯ್ಲಿ ಹೇಳ್ಲಿ, ಇದೆಲ್ಲ ನೋಡಿ.

ತಾತ ಆಗ್ಲೋ ಈಗ್ಲೋ ಅನ್ನೋ ವಯಸ್ಸಲ್ಲಿ ಕಾಲ ಕಳೀತದೆ, ಹೆಂಗಾರ ಮಾಡಿ, ಪಕ್ಸನಾ ಮತ್ತೇ ಕಟ್ಟಾನಾ ಅಂತ ಕಾಲ್ ಗಾಡಿ ಕಟ್ಕಂಡೆ ಬತ್ತದೆ, ಚಿಗಪ್ಪ ಎಲ್ಡ್ ಮೂರ್ ಸತ ಎದೆ ಕೂಯಸ್ಕಂಡ್ರು, ಪಕ್ಸಕ್ಕೋಸ್ಕರ ಏನಾರ ಮಾಡ್ತೀನಿ, ರೈತ್ರಿಗೋಸ್ಕರ ಏನಾರ ಮಾಡ್ತಿನಿ ಅಂತ ಓಡಾಡ್ತದೆ, ಇಲ್ಲಿ ಈ ಮಗಾ ನೋಡಿದ್ರೆ, ಐದ್ ರ‍್ಸಿಂದ ಇದೇ ಮಾಡ್ತಿತ್ತೋ ಏನೋ ಒಂದ್ ಗಾಡಿಗಾಗೋವಷ್ಟು ಇಡಿಯೋ ಮಾಡ್ಕಂಡದೆ ಅಂತ ಬೇಜಾರಾದ್ರು.

ಮಗ ಮಾಡಿದ್ ತಪ್ಗೆ ಅಪ್ಪ ಹೋಗಿ ಜೈಲಿಗ್ ಕೂತ್ಕಂಡವ್ನೆ, ಹೆಂಗೂ ರ‍್ಗೆ ವಸಿ ಕೆಲಸ ಮಾಡಿಸತುದ್ದ, ಅಂಕಾರ ಇತ್ತು, ಆದ್ರೂವೆ ಬೇಕು ಅಂದಿದ್ನಾ ಒಳ್ಳೆದ್ ಕೆಟ್ಟುದ್ ಮಾಡ್ಸಿ ಕೊಡನು, ಈಗ ಅವಪ್ಪನೂ ಜೈಲಿಗೋಗವ್ನೆ, ಹಿಂಗಾದ್ರೆ ಹೆಂಗೆ ಬಾಳಿದ್ ಮನೆ ಹಿಂಗ್ ಹಾಳಾದ್ರೆ, ನಮ್ ಹಾಳ್ ಕಣ್ಣಿಂದ ಇದೆಲ್ಲ ನೋಡಾಕ್ ಆಯ್ತದಾ ಮಗಾ ಅಂತ ಮುಂದುವರಿದ್ರು.

ಗೋಡ್ರು ಬೇಜಾರ್ ನೋಡಾಕಾಗ್ದೆ, ಬುಡಿ ಗೌಡ್ರೆ, ಮಣ್ಣಿಂದ ಎದ್ ಬರೋ ಗೌಡ್ರುಗೆ ಇದೆಲ್ಲ ಯಾವ್ ಲೆಕ್ಕಾ, ಇದೆಲ್ಲ ಗೆದ್ಕಂಡ್ ಬತ್ತಾರೆ, ಮತ್ತೇ ಪಾರ್ಟಿ ಕಟ್ತಾರೆ ಅಂದೆ, ಮಣ್ಣಿಂದ ಎದ್ದ್ ರ‍್ಬೋದು ಮಗಾ, ಆದ್ರೆ,. ಇದ್ರಿಂದ ಬಾರಿ ಕಷ್ಟ ಕಣೋ, ಹಿರಿಯ್ರು ಸುಮ್ನೇ ಹೇಳಾವ್ರೆ, ಕಾದಾಡವ್ನೆಗೆ ಕಚ್ಚೆ ಭದ್ರ ರ‍್ಬೇಕು ಅಂತಾ, ಅದೇ ಸಡ್ಲಾ ಆದ್ರೆ ಏನ್ ಮಾಡಕಾಯ್ತದೆ? ಅಂದ್ರು ಗೋಡ್ರು,

ಹಿಂಗೆ ದೊಡ್ಡ ಗೌಡ್ರು ಮ್ಯಾಲ್ ಪ್ರೀತಿ ಇಟ್ಕೊಂಡು, ನಿಮ್ಮನ್ನ ಗೆಲ್ಲಿಸ್ತಿದ್ದೋ ಅದೆಷ್ಟೋ ಜೀವಗಳಾವೆ, ಅವುಕ್ಕಾದ್ರೂ ಬೆಲೆ ಕೊಡ್ರಿ “ಎಲ್ಲಿದ್ದಿಯಪ್ಪಾ ಪ್ರಜ್ವಲ್ಲೂ ಅಂದ್ಕಂಡು ಬಸ್ ಹತ್ತಿದೆ. ಅಲ್ ನೋಡಿದ್ರೆ, ಬರೀ ಬರೀ ಹೆಂಗಸ್ರೆ ತುಂಬಾವ್ರೆ ಬಸ್ಸಿನ್ ತುಂಬಾವ, ಫುಲ್ ಗ್ಯಾರಂಟಿ ಹವಾ. ಕಂಡಕ್ಟುç ಟಿಕೆಟ್ ಕೊಡೋವಸ್ಟೊತ್ತಿಗ್ ಸಾಕ್ ಸಾಕಾಗ ಹೋದ್ರು, ಸ್ವಾಮಿ ನೀವೊಬ್ರಾದ್ರೂ ಬಂದ್ರಾ ಬನ್ನಿ ಅಂತ ಟಿಕೆಟ್ ಕೊಟ್ಟು, ಸೀಟ್ ಮಾತ್ರ ಕೇಳ್ಬ್ಯಾಡಿ ಅಂದ್ರು. ಸರಿ ಬುಡ್ ಗುರು ಅಂತ ಕಂಬಿ ಒರಿಕಂಡ್ ನಿಂತ್ಕಂಡೆ ಸಿವಾ


Share It

You cannot copy content of this page