ಹುಬ್ಬಳ್ಳಿ, ಏ.20: ನೇಹಾ ಹಿರೇಮಠ್ ಹತ್ಯೆಗೆ ಸಂಬಂಧಿಸಿದಂತೆ ಹಂತಕ ಫಯಾಜ್ ತಂದೆ-ತಾಯಿ ಇಬ್ಬರನ್ನು ಅರೆಸ್ಟ್ ಮಾಡಿ, ನಾನು ಅವರ ವಿರುದ್ದ ದೂರು ಕೊಡುತ್ತೇನೆ ಎಂದು ನೇಹಾ ತಂದೆ ನಿರಂಜನ್ ಹಿರೇಮಠ್ ಹೇಳಿದರು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ‘ಸಾಮಾಜಿಕ ಜಾಲತಾಣದಲ್ಲಿ ನನ್ನ ಮಗಳ ಫೊಟೋಗಳನ್ನ ಹಾಕುತ್ತಿದ್ದಾರೆ. ನನ್ನ ಮಗಳಿಗೆ ಫಯಾಜ್ ಅಕ್ಕ , ಅವರ ತಂದೆ-ತಾಯಿ ಪ್ರವೋಕ್ ಮಾಡಿದ್ದಾರೆ. ಹೀಗಾಗಿ ನಾನು ದೂರು ಕೊಡ್ತೀನಿ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪೋಟೋಗಳು ಕಾಲೇಜ್ ಫಂಕ್ಷನ್, ಈವೆಂಟ್ನಲ್ಲಿ ಭಾಗಿಯಾಗಿದ್ದು, ಅದನ್ನ ಈಗ ವೈರಲ್ ಮಾಡುತ್ತಿದ್ದಾರೆ. ಪೊಲೀಸರು ಇದನ್ನು ಗಮನಿಸಬೇಕು. ಕೂಡಲೇ ಅವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಜೊತೆಗೆ ಫಯಾಜ್ ತಂದೆ-ತಾಯಿ ಇಬ್ಬರು ಕೂಡ ಶಿಕ್ಷಕರು, ಸಣ್ಣ ಮಕ್ಕಳಿಗೆ ಪಾಠ ಮಾಡುವವರು ನನ್ನ ಮಗಳ ಬ್ರೇನ್ ವಾಶ್ ಮಾಡಲು ಹೇಳಿದ್ದಾರೆ. ಬಂದ್ರೆ ಕರೆದುಕೊಂಡು ಬಾ, ಇಲ್ಲದಿದ್ದರೆ ಹೊಡೆದು ಬಾ ಎಂದು ಅವರೇ ಹೇಳಿದ್ದಾರೆ. ಹೀಗಾಗಿ ಅವರು ತಂದೆ-ತಾಯಿಯನ್ನು ಅರೆಸ್ಟ್ ಮಾಡಬೇಕು ಎಂದು ಹೇಳಿದರು.
ನೇಹಾಗೆ ನಡೆದಿತ್ತಾ ಲವ್ ಜಿಹಾದ್ ಷಡ್ಯಂತ್ರ?
ನೇಹಾಗೆ ಲವ್ ಜಿಹಾದ್ ಷಡ್ಯಂತ್ರ ನಡೆದಿತ್ತಾ?, ಈ ಷಡ್ಯಂತದಲ್ಲಿ ಫಯಾಜ್ ಕುಟುಂಬದವರು ಪಾಲುದಾರರು ಆಗಿದ್ರಾ ಎಂಬ ಪ್ರಶ್ನೆಯೂ ಮೂಡಿದ್ದು, ಫಯಾಜ್ ಅಕ್ಕ ನಿಶಾ ಅವರು ನೇಹಾ ಜೊತೆ ಮಾಡಿರುವ ಚಾಟಿಂಗ್ ಸಾಕ್ಷಿ ಹೇಳುತ್ತಿವೆ. ಫಯಾಜ್‌ನನ್ನ ಮದುವೆ ಆಗುವಂತೆ ಸಹೋದರಿ ನಿಶಾ ಒತ್ತಾಯಿಸಿರುವುದು ಚಾಟಿಂಗ್‌ನಲ್ಲಿ ಬಯಲಾಗಿದೆ. ಜೊತೆಗೆ ಕಳೆದ ಫೆಬ್ರವರಿಯಲ್ಲಿಯೇ ಬೇಗ ಮದುವೆ ಮಾಡಿಕೊಳ್ಳಿ ಎಂದು ಫಯಾಜ್ ಸಹೋದರಿ ನೇಹಾಗೆ ಹೇಳಿದ್ದು, ನೀ ಸ್ಟ್ರಾಂಗ್ ಆಗಿ ಇರು ಎಂದು ಸಂದೇಶ ಕಳಿಸಿದ್ದಾರೆ. ಮದುವೆ ಆದ್ರೆ ನೀವು ಚೆನ್ನಾಗಿ ಇರುತ್ತಿರಿ ಎಂದು ಫಯಾಜ್ ಸಹೋದರಿ ನೇಹಾ ತಲೆ ಕೆಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿ ಮನೆಯಲ್ಲಿ ಮದುವೆ ಪ್ರಪೋಜಲ್ ತಂದಿದ್ದಾರೆ, ಮದುವೆಗೆ ಒತ್ತಾಯ ಮಾಡುತ್ತಿದ್ದಾರೆ, ಜೀವನ ಸಾಕಾಗಿದೆ ಎಂದು ನೇಹಾ ಗೋಳು ತೋಡಿಕೊಂಡಿದ್ದರು.