ಅಪರಾಧ ರಾಜಕೀಯ ಸುದ್ದಿ

ಅಪಘಾತ ಮಾಡಿದವನಿಗೆ ಫೀಜಾ, ಬರ್ಘರ್ , ಮೃತರ ಬಗ್ಗೆ ತನಿಖೆ !

Share It

ಪುಣೆ: ವೇಗವಾಗಿ ಕಾರು ಚಾಲನೆ ಮಾಡಿ, ಇಬ್ಬರ ಸಾವಿಗೆ ಕಾರಣವಾದ ಉದ್ಯಮಿಯ ಮಗನಿಗೆ ರಾಜಾತಿಥ್ಯ ನೀಡಿರುವ ಪೊಲೀಸರು, ಸಾವಿಗೀಡಾದ ವ್ಯಕ್ತಿಗಳಿಬ್ಬರ ಸಂಬಂಧಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಪ್ರಕಾಶ್ ಅಂಬೇಡ್ಕರ್ ಟೀಕಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ವ್ಯವಸ್ಥೆಯೊಂದು ಬಡವರು ಮತ್ತು ಶ್ರೀಮಂತರ ನಡುವೆ ಹೇಗೆ ಬದಲಾಗುತ್ತದೆ ಎಂಬುದನ್ನು ಪುಣೆಯ ಅಪಘಾತ ಉತ್ತಮ ಉದಾಹರಣೆ. ಶೀಮಂತರ ಮಗ ಎಂಬ ಕಾರಣಕ್ಕೆ ಕ್ಲಬ್‌ನಲ್ಲಿ ಆತನಿಗೆ ಅಪ್ರಾಪ್ತನಾದರೂ, ಮದ್ಯ ಕೊಡಲಾಗುತ್ತದೆ. ಇದೆಲ್ಲ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಹಣವಂತರಿಗೆ ಕಾರ್ ಶೋರೂಮ್‌ಗಳು ನೋಂದಣಿಯಾಗದಿರುವ ಕಾರನ್ನು ಕೊಟ್ಟು ಕಳಿಸುತ್ತವೆ. ಇದೆಲ್ಲ ಟ್ರಾಫಿಕ್ ಪೊಲೀಸರ ಕಣ್ಣಿಗೆ ಕಾಣುವುದೇ ಇಲ್ಲ, ಆಲ್ಕೋಹಾಲ್ ಪ್ರಮಾಣ ಕಂಡುಹಿಡಿಯಲು ಪೊಲೀಸರು, 8 ಗಂಟೆಗಳ ಬಳಿಕ ಆತನ ರಕ್ತ ಪರೀಕ್ಷೆ ನಡೆಸುತ್ತಾರೆ. ಹೀಗೆ, ಉಳ್ಳವರ ಪರವಾಗಿ ಏನೇನು ಸಾಧ್ಯವೋ ಅಂತಹದ್ದೆಲ್ಲ ಘಟನೆಗಳು ಜರುಗುತ್ತವೆ ಎಂದು ಕಿಟಿಕಾರಿದ್ದಾರೆ.

ಉಪಮುಖ್ಯಮಂತ್ರಿ ಮುಂಬೈನಿಂದ ಪುಣೆಗೆ ಬರುತ್ತಿದ್ದಂತೆ ಬಿಲ್ಡರ್ ಮಗನಿಗೆ ಬಾಲ ನ್ಯಾಯಾಲಯಕ್ಕೆ ಕಳುಹಿಸುವ ಮೊದಲೇ ಬೇಲ್ ಸಿಗುತ್ತದೆ. ಅಧಿಕಾರಿಗಳು ಇದೆಲ್ಲ ತನಿಖೆ ನಡೆಸುವ ಕ್ರಮವಲ್ಲ ಎಂದು ಭಾವಿಸಿಕೊಂಡಿಲ್ಲ ಎನಿಸುತ್ತದೆ. ಘಟನೆ ಎಲ್ಲೆಡೆ ಸುದ್ದಿಯಾದ ಮೇಲೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಪುಣೆಯ ನಾಗರಿಕರು ಜಾಗೃತರಲ್ಲದಿದ್ದರೆ, ಈ ಪ್ರಕರಣ ಇಷ್ಟು ಕೂಡ ಬೆಳಕಿಗೆ ಬರುತ್ತಿರಲಿಲ್ಲ. ಮಕ್ಕಳನ್ನು ಕಳೆದುಕೊಂಡ ಪೋಷಕರ ನೋವು ಹೇಳತೀರದು. ಇದಕ್ಕೆಲ್ಲ ನಾವು ಬೆಂಬಲವಾಗಿ ನಿಲ್ಲಬೇಕಿದೆ ಎಂದು ತಿಳಿಸಿದ್ದಾರೆ.


Share It

You cannot copy content of this page