ರಾಜಕೀಯ ಸುದ್ದಿ

ಸಿಎಂ ಸಿದ್ದರಾಮಯ್ಯ ಕುರಿತು ಸುಳ್ಳು ಸುದ್ದಿ: ಎಫ್ ಐ ಆರ್.

Share It


ಬೆಂಗಳೂರು:
ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ದಿನಪತ್ರಿಕೆ ಕ್ಲಿಪ್ಪಿಂಗ್ ರೂಪದಲ್ಲಿ ಹರಡಿದವರ ವಿರುದ್ಧ ಪಶ್ಚಿಮ ಸೈಬರ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಬೆಂಗಳೂರಿನ ಪ್ರಭಾಕರ್, ವಸಂತ್ ಗಿಳಿಯಾರ್, ವಿಜಯ್ ಹೆರಗು, ಪಾಂಡು ಮೋದಿಕ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಬಿಎಸ್ ವೈ ಬೆಂಬಲಿಗರು, ದಾವಣಗೆರೆ ಬಿಜೆಪಿ ಮತ್ತು ದಾತ್ರಿ ಗೋಶಾಲೆ ಗೋಳೂರು ಎಂಬ ಹೆಸರಿನ ಫೇಸ್ ಬುಕ್ ಪೇಜ್ ಗಳ ಹೆಸರನ್ನು ಸಹ ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

ದಿನಪತ್ರಿಕೆಯ ಕ್ಲಿಪ್ಪಿಂಗ್ ರೂಪದಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆ ಎಂಬಂತೆ ‘ ನಮಗೆ ಹಿಂದೂಗಳ ಅಗತ್ಯವಿಲ್ಲ, ಮುಸ್ಲಿಮರ ವೋಟು ಮಾತ್ರವೇ ಸಾಕು, ನಾನು ಮುಸ್ಲಿಂ ಆಗಿ ಹುಟ್ಟಲು ಬಯಸುತ್ತೇನೆ. ಮುಸ್ಲಿಂ ಓಲೈಕೆ ಬಗ್ಗೆ ಬಿಜೆಪಿ ಟೀಕೆ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ” ಎಂದು ಹೇಳಿದ್ದಾರೆ ಎಂಬ ರೀತಿಯಲ್ಲಿ ಜರಡಲಾಗಿದೆ.

ಈ ಸಂಬಂಧ ಹರೀಶ್ ನಾಗರಾಜ್ ಎಂಬುವವರು ದೂರು ನೀಡಿದ್ದು, ಸಿಎಂ ಸಿದ್ದರಾಮಯ್ಯ ಅವರು ಸಹ ದೂರು ದಾಖಲಿಸಿದ್ದಾರೆ. ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Share It

You cannot copy content of this page