ಬೆಂಗಳೂರು
ಸಿಇಟಿ ಪರೀಕ್ಷೆ ಬರೆಯಲು ಆನ್ ಲೈನ್ ನಲ್ಲಿ ಅರ್ಜಿ ಸಲಗಲಿಸಿದ್ದು. ಈವರೆಗೆ ಶುಲ್ಕ ಪಾವತಿ ಮಾಡದ ವಿದ್ಯಾರ್ಥಿಗಳಿಗಾಗಿ ಸರಕಾರ ಮತ್ತೊಂದು ಅವಕಾಶ ನೀಡಿದ್ದು, ಏ.12 ರವರೆಗೆ ಶುಲ್ಕ ಪಾವತಿ ಮಾಡಬಹುದಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಕುರಿತು ಆದೇಶ ಹೊರಡಿಸಿದ್ದು, ಇದುವರೆಗೆ ಶುಲ್ಕ ಪಾವತಿ ಮಾಡದ ವಿದ್ಯಾರ್ಥಿಗಳು ಏ.10 ರಿಂದ ಏ. 12 ರ ಸಂಜೆ 5 ಗಂಟೆವರೆಗೆ ಶುಲ್ಕ ಪಾವತಿ ಮಾಡಬಹುದಾಗಿದೆ.
ಶುಲ್ಕ ಪಾವತಿಸಲು ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇವರ ಹೆಸರಿಗೆ 600 ರು.ಗಳ ಡಿಡಿ ತೆಗೆಸಿಕೊಂಡು, ಸಿಇಟಿ ಅರ್ಜಿ ನಮೂನೆ ಸಹಿತ ಪ್ರಾಧಿಕಾರದ ಕಚೇರಿಗೆ ಖುದ್ದು ಹಾಜರಾಗಬೇಕು ಎಂದಿ ತಿಳಿಸಿದೆ.
ನೀಟ್ ಆಯ್ಕೆಯಿಂದ ಸಿಇಟಿ ಆಯ್ಕೆಗೆ ಬದಲಾವಣೆ ಮಾಡಿಕೊಳ್ಳಲು ಸಹ ಇದೇ ದಿನಾಂಕದಲ್ಲಿ ಅವಕಾಶ ನೀಡಿದ್ದು, ಈ ವಿದ್ಯಾರ್ಥಿಗಳಿಗೆ ರಾಜ್ಯದ ಯಾವುದೇ ಭಾಗದ ಖಾಲಿಯಿರುವ ಪರೀಕ್ಷಾ ಕೇಂದ್ರದಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ.