ಮೊದಲ ಮಹಿಳಾ ಆಟೋ‌ ಡ್ರೈವರ್  ಮರ್ಡರ್: ಆಟೋ ಪಕ್ಕದಲ್ಲಿಯೇ ಬಿದ್ದಿತ್ತು ಆಕೆಯ ಶವ !

Share It

ಝಾನ್ಸಿ : ಝಾನ್ಸಿಯ ಮೊದಲ ಮಹಿಳಾ ಆಟೋ ಡ್ರೈವರ್ ಎನಿಸಿಕೊಂಡಿದ್ದ ಅನಿತಾ ಚೌಧರಿ ಗುಂಡೇಟಿನಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಆಕೆ ಗುಂಡೇಟಿನಿಂದ ಮೃತಪಟ್ಟಿದ್ದಾಳೆ ಎಂದು ಹೇಳಲಾಗುತ್ತಿದ್ದು, ನವಾಬಾದ್ವಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬಳು ಗಾಯಗೊಂಡು ನರಳುತ್ತಿದ್ದಾರೆ ಎಂಬ ಮಾಹಿತಿ ಬಂದಿತ್ತು. ಅದನ್ನು ಆಧರಿಸಿ ಸ್ಥಳಕ್ಕಾಗಮಿಸಿದ್ದ ಪೊಲೀಸರಿಗೆ ಆಟೋ‌ ಪಕ್ಕದಲ್ಲಿಯೇ ಮಹಿಳೆಯೊಬ್ಬರು ಸತ್ತು ಬಿದ್ದಿರುವುದು ಗೊತ್ತಾಗಿದೆ. ಆಕೆ ಝಾನ್ಸಿಯ‌ ಮೊದಲ‌ ಮಹಿಳಾ ಆಟೋ ಡ್ರೈವರ್ ಎಂದು ಗುರುತಿಸಲಾಯಿತು.

2021 ರಿಂದ ಆಟೋ ರಿಕ್ಷಾ ಓಡಿಸುತ್ತಾ ತನ್ನ ಕುಟುಂಬ ಹಾಗೂ ಮೂವರು ಮಕ್ಕಳನ್ನು ಅನಿತಾ ಸಾಕುತ್ತಿದ್ದರು ಎನ್ನಲಾಗಿದೆ. ಎಂದಿನಂತೆ ಆಕೆ ರಾತ್ರಿ ಆಟೋ ಓಡಿಸಲು ತೆರಳಿದ್ದ ಬೆಳಗ್ಗೆ ವೇಳೆಗೆ ಮೃತಪಟ್ಟ ಬಗ್ಗೆ ವರದಿಯಾಗಿದೆ. ಅನೈತಿಕ ಸಂಬಂಧದ‌ ಕಾರಣಕ್ಕೆ ಕೊಲೆ ನಡೆದಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಆಕೆಗೆ ಐದಾರು ವರ್ಷಗಳಿಂದ ಮತ್ತೊಬ್ಬ ವ್ಯಕ್ತಿಯ ಜತೆಗೆ ಸಂಬಂಧವಿದ್ದು, ಆತನೇ ಆಕೆಯನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಆಕೆಯ ಸಂಗಾತಿ ಹಾಗೂ ಆತನ ಸಹಚರನನ್ನು ಬಂಧಿಸಲಾಗಿದೆ. ಮತ್ತೊಬ್ಬನ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.


Share It

You May Have Missed

You cannot copy content of this page