ಬೆಂಗಳೂರು: ದೇಶದ ಗಮನ ಸೆಳೆದಿರುವ ದೊಡ್ಡಗೌಡರ ಮನೆಯ ಲೈಂಗಿಕ ಹಗರಣಕ್ಕೆ ಸಂಬAಧಿಸಿದAತೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣಗೆ ಎಸ್‌ಐಟಿ ನೊಟೀಸ್ ನೀಡಿದೆ.
ಮಂಗಳವಾರದಿAದ ತನ್ನ ತನಿಖೆ ಆರಂಭಿಸಿರುವ ಎಸ್‌ಐಟಿ ತಂಡ ಮೊದಲ ದಿನವೇ ಭರ್ಜರಿ ಭೇಟೆಯಾಡಿದೆ. ಮೊದಲ ದಿನವೇ ಕೆಲವು ಸಂಸ್ತçಸ್ತೆಯನ್ನು ಭೇಟಿ ಮಾಡಿರುವ ಎಸ್‌ಐಟಿ ತಂಡ, ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಈ ಆಧಾರದಲ್ಲಿ ವಿಚಾರಣೆಗೆ ಹಾಜರಾಗುವಂತೆ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣನಿಗೆ ನೊಟೀಸ್ ನೀಡಿದೆ. ಹಾಸನದ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬAಧ ಎಐಟಿ ತಂಡ ಮಾಹಿತಿ ಕಲೆಹಾಕಿತ್ತು. ಈ ಪ್ರಕರಣದಲ್ಲಿ ಆರೋಪಿಗಳ ಹೇಳಿಕೆ ಅಗತ್ಯವಿರುವ ಹಿನ್ನೆಲೆಯಲ್ಲಿ ಸಿಆರ್‌ಪಿಸಿ ೪೧(ಂ)ಯಡಿ ಇಬ್ಬರಿಗೂ ನೋಟಿಸ್ ನೀಡಲಾಗಿದೆ.
ಆರೋಪ ಕೇಳಿಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದಾರೆ. ಎಸ್‌ಐಟಿ ವಿಚಾರಣೆ ನೆಪದಲ್ಲಿ ಅರೆಸ್ಟ್ ಮಾಡಬಹುದು ಎಂಬ ಅನುಮಾನದಲ್ಲಿಯೇ ಅವರು ವಿದೇಶಕ್ಕೆ ಹೋಗಿದ್ದಾರೆ ಎಂಬ ಅನುಮಾನವಿದೆ. ಆದರೆ, ರೇವಣ್ಣ ಮಾತನಾಡಿ, ವಿಚಾರಣೆಗೆ ಕರೆದರೆ ಹಾಜರಾಗುತ್ತೇವೆ ಎಂದಿದ್ದರು. ಇದೀಗ ನೊಟೀಸ್ ನೀಡಿರುವ ಎಸ್‌ಐಟಿ ತಾವು ನೀಡಿರುವ ನೋಟಿಸ್ ತಲುಪಿದ ೨೪ ಗಂಟೆಯೊಳಗೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಈ ನೋಟಿಸ್‌ಗೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.