ರಾಜಕೀಯ ಸುದ್ದಿ

ಮಾಜಿ ಸಿಎಂ ಚುನಾವಣಾ ಖರ್ಚಿಗೆ ಹಣ ನೀಡಿದ ಜನರು!

Share It

ಮಂಡ್ಯ: ಲೋಕಸಭಾ ಚುನಾವಣೆ ಕಾವು ಜೋರಾಗಿದೆ. ಎರಡೂ ಪಕ್ಷಗಳು ಗೆಲುವಿಗಾಗಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಅದರಂತೆ ಇಂದು(ಏ.23) ಮಂಡ್ಯ ಲೋಕಸಭಾ ಕ್ಷೇತ್ರ ಮೈತ್ರಿ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮದ್ದೂರಿನಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ- ಜೆಡಿಎಸ್​ ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರು, ಚುನಾವಣೆ ಖರ್ಚಿಗಾಗಿ ಕುಮಾರಸ್ವಾಮಿ ಅವರಿಗೆ ಧನಸಹಾಯ ಮಾಡಿದ್ದಾರೆ.

10ಕ್ಕೂ ಹೆಚ್ಚು ಜನರು 5 ರೂ.10 ರೂ., 50 ಸಾವಿರ ರೂ.ನಂತೆ 4 ಲಕ್ಷ ರೂ.ಗಳಿಗೂ ಅಧಿಕ ಹಣ ನೀಡಿದ್ದು, ಜನರ ಈ ಪ್ರೀತಿಗೆ ಎಚ್.ಡಿ.ಕುಮಾರಸ್ವಾಮಿ ಮಾರುಹೋಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ 2 ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಈ ಬಾರಿ ಏಕೆ ಈ ರೀತಿಯ ಆರ್ಥಿಕ ಸಂಕಷ್ಟ ಎದುರಾಗಿದೆ ಎಂಬ ವಿಷಯ ಮಾತ್ರ ಇನ್ನೂ ಗೌಪ್ಯವಾಗೇ ಉಳಿದುಕೊಂಡಿದೆ.


Share It

You cannot copy content of this page