ರಾಜಕೀಯ ಸುದ್ದಿ

ಲೋಕಸಭಾ ಚುನಾವಣೆಯ ನಂ.1 ಶ್ರೀಮಂತ ಅಭ್ಯರ್ಥಿ ಪೆಮ್ಮಾ ಸಾನಿ ಚಂದ್ರಶೇಖರ್ !

Share It

ಹೈದರಾಬಾದ್: ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ಗುಂಟೂರು ಕ್ಷೇತ್ರದ ಅಭ್ಯರ್ಥಿ ಪೆಮ್ಮಾ ಸಾನಿ ಚಂದ್ರಶೇಖರ್ 2024ರ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲೇ ಅತ್ಯಂತ ಶ್ರೀಮಂತ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವೃತ್ತಿಯಲ್ಲಿ ವೈದ್ಯನಾಗಿರುವ ಪೆಮ್ಮಾ ಸಾನಿ ಚಂದ್ರೇಖರ್ ಹಲವಾರು ಉದ್ಯಮಗಳನ್ನು ಹೊಂದಿದ್ದು, ಅಧಿಕೃತವಾಗಿ ಘೋಷಣೆ ಮಾಡಿಕೊಂಡಿರುವ ಆಸ್ತಿಯ ಮೊತ್ತವೇ 5785.28 ಕೋಟಿ ರೂ. ಆಗಿದೆ.

ಪೆಮ್ಮಾ ಸಾನಿ ಚಂದ್ರಶೇಖರ್ 2022-23ರಲ್ಲಿ 3,68,840 ಲಕ್ಷ ರೂ. ಆದಾಯ ಘೋಷಿಸಿಕೊಂಡಿದ್ದರು. ಪತ್ನಿ ಕೊನೆರೂ ಶ್ರೀರತ್ನ ಅವರ ಆದಾಯ 1,47,680 ಲಕ್ಷ ರೂ. ಆಗಿತ್ತು.

ಚಂದ್ರಶೇಖರ್ ಅವರ ಚರಾಸ್ತಿ ಮೌಲ್ಯ ನಿಶ್ಚಿತ ಠೇವಣಿ ಸೇರಿದಂತೆ ಹಲವು ಹೂಡಿಕೆ ಸೇರಿದಂತೆ 2316 ಕೋಟಿ ರೂ. ಆಗಿದೆ. ಪತ್ನಿ ಕೊನೆರೂ ಶ್ರೀರತ್ನ ಅವರ ಆಸ್ತಿ 2289 ಕೋಟಿ ರೂ. ಆಗಿದೆ.

ಇಬ್ಬರ ಸ್ಥಿರಾಸ್ತಿ ಮೌಲ್ಯ 72 ಕೋಟಿ ರೂ. ಆಗಿದೆ. ಇದರಲ್ಲಿ ಚಂದ್ರಶೇಖರ್ ಅವರ ಪಾಲು 34 ಕೋಟಿ ರೂ. ಆಗಿದೆ. ಇಬ್ಬರ ಹೆಸರಲ್ಲೂ 519 ಕೋಟಿ ರೂ. ಆಸ್ತಿ ಜಂಟಿ ಒಡೆತನದಲ್ಲಿದೆ. ದಂಪತಿಗಳು ಜಗತ್ತಿನಾದ್ಯಂತ 101 ಕಂಪನಿಗಳಲ್ಲಿ ಷೇರು ಬಂಡವಾಳ ಹೊಂದಿದ್ದಾರೆ.


Share It

You cannot copy content of this page