ಆರೋಗ್ಯವೇ ಭಾಗ್ಯ:ದುಡಿಮೆಯ ಜತೆಗೆ ನಮ್ಮ ಆರೋಗ್ಯದ ಬಗ್ಗೆ ಗಮನವಿರಲಿ
ಆರೋಗ್ಯ ಚೆನ್ನಾಗಿದ್ದರೆ ನಾವು ಏನೆನ್ನಾದರೂ ಮಾಡಬಹದು ಆದ್ದರಿಂದ ಮೊದಲು ಆರೋಗ್ಯದ ಕಾಳಜಿ ಮಾಡಿಕೊಳ್ಳಬೇಕು. ಆರೋಗ್ಯ ಕೆಟ್ಟರೆ ಯಾರು ಸರಿ ಮಾಡಲು ಸಾಧ್ಯವಿಲ್ಲ, ಏಕೆಂದರೆ ಎಷ್ಟೆ ಔಷಧಿ ತೆಗೆದುಕೊಂಡರು ಔಷಧಿ ಇಲ್ಲದ ಉತ್ತಮ ಆರೋಗ್ಯ ಒಮ್ಮೆ ಆರೋಗ್ಯ ಕೈಕೊಟ್ಟರೆ ಸಿಗುವುದಿಲ್ಲ.
ಆರೋಗ್ಯದ ಕಾಳಜಿಗಾಗಿ ಆಹಾರದ ಆಯ್ಕೆ ಉತ್ತಮವಾಗಿರಬೇಕು , ಆಹಾರದ ಆಯ್ಕೆಯೇ ಆರೋಗ್ಯದ ಕಾಳಜಿಗೆ ಮೊದಲ ಸ್ಥಾನ. ಒಳ್ಳೆಯ ಪ್ರೊಟೀನ್ ಇರುವಂತಹ, ತರಕಾರಿ, ಹಣ್ಣು ಇಂತಹ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ.
ಮೊದಲೇಲ್ಲಾ ನಮ್ಮ ಹಿರಿಯರು ಸಾಕಾಷ್ಟು ಪ್ರೊಟೀನ್‌ಯುಕ್ತ ಆಹಾರವನ್ನೆ ಸೇವಿಸುತ್ತಿದ್ದರು ಆದ್ದರಿಂದ ಅವರು ಯಾರು ಕೂಡ ಎಂದಿಗೂ ಅತಿಯಾದ ಆಹಾರ ಸಮಸ್ಯೆಯನ್ನು ಎದುರಿಸುತ್ತಿರಲಿಲ್ಲ. ಗಟ್ಟಿಮುಟ್ಟಾಗಿ ಕೆಲಸ ಮಾಡಿಕೊಂಡು ಇದ್ದರು, ಆದರೆ ಇಂದು ನಾವುಗಳು ಅತಿಯಾದ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ , ಇದಕ್ಕೆ ಕಾರಣ ನಮ್ಮ ಆಹಾರ ಪದ್ಧತಿ. ಸರಿಯಾದ ಪ್ರೊಟೀನ್‌ಯುಕ್ತ ಆಹಾರ ಪದ್ಧತಿ, ದೇಹಕ್ಕೆ ಸ್ವಲ್ಪ ಸಮಯ ವ್ಯಾಯಾಮ, ಯೋಗಗಳಂತಹ ಚಟುವಟಿಕೆಯನ್ನು ಮಾಡಿದರೆ ಆರೋಗ್ಯ ಎಂದು ಕೈ ಕೊಡುವುದಿಲ್ಲ.
ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ ಎಂದರೆ ತಪ್ಪೇನಿಲ್ಲ , ನಮ್ಮ ಪ್ರತಿನಿತ್ಯದ ಚಟುವಟಿಕೆಯಿಂದ ಇಡಿದು , ಆಹಾರ ಪದ್ಧತಿ ಹೇಗಿರುತ್ತದೆ ಅದರಂತೆ ನಮ್ಮ ಆರೋಗ್ಯ ಇರುತ್ತದೆ. ಆದ್ದರಿಂದ ಎಲ್ಲರು ಆರೋಗ್ಯದ ಕಾಳಜಿಗೆ ಮೊದಲ ಅಧ್ಯತೆ ಕೊಟ್ಟರೆ ಆರೋಗ್ಯದ ಸಮಸ್ಯೆ ಎಂದು ಯಾರಿಗೂ ಕಾಡುವುದಿಲ್ಲ.
ಒಳ್ಳೆಯ ಆಹಾರ , ಹಣ್ಣು , ತರಕಾರಿ , ವ್ಯಾಯಾಮ , ಯೋಗ ಮಾಡುವುದುರಿಂದ ಅನಾರೋಗ್ಯ ಸಮಸ್ಯೆಗಳಿಗೆ ಕಡಿವಾಣ ಹಾಕಬಹುದು. ಆದ್ದರಿಂದ ಎಲ್ಲರು ಮೊದಲು ಆರೋಗ್ಯದ ಕಾಳಜಿ ಬಗ್ಗೆ ಗಮನ ಹರಿಸಿದರೆ ಉತ್ತಮ.
ಆರೋಗ್ಯ ಕಾಳಜಿಗೆ ಒಂದಷ್ಟು ಟಿಪ್ಸ್
೧. ನಿಯಮಿತವಾಗಿ ವ್ಯಾಯಾಮ ಮಾಡುವುದು ಒಳ್ಳೆಯದು. ನಿತ್ಯ ೩೦ ನಿಮಿಷಗಳ ಕಾಲ ನಡೆಯಬೇಕು, ಈಜು ಅಥವಾ ಯೋಗದಂತಹ ದೈಹಿಕ ಚಟುವಟಿಕೆ ಮಾಡಬೇಕು, ಇದರಿಂದ ಹೃದಯ ರಕ್ತನಾಳದ ಆರೋಗ್ಯ, ತೂಕ ನಿರ್ವಹಣೆ ಮತ್ತು ಸಮಸ್ಯೆಗಳು ನಿವಾರಣೆಯಾಗತ್ತದೆ.
೨. ಆರೋಗ್ಯಕ್ಕೆ ನಿದ್ರೆ ಸಹ ಮುಖ್ಯ , ಆದ್ದರಿಂದ ನಿಗದಿತ ಸಮಯದಲ್ಲಿ ಗಾಢ ನಿದ್ರೆಯನ್ನು ಮಾಡಬೇಕು. ನಿದ್ರೆ ಮಾಡಲು ಹೊಗುವ ಮುನ್ನ ಕೆಪಿನ್ ಸೇವನೆ, ಮೊಬೈಲ್, ಕಂಪ್ಯೂಟರ್‌ಗಳ ಬಳಕೆ ಕಡಿಮೆ ಮಾಡಬೇಕು. ಇವುಗಳಿಗಿಂತ ಮಲಗುವಾಗ ನಿಮಗೆ ಇಷ್ಟವಾದ ಸಂಗೀತ ಕೇಳುವುದು ಉತ್ತಮ
೩. ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಒತ್ತಡಗಳು ಪರಿಣಾಮ ಬೀರುತ್ತದೆ. ಆದ್ದರಿಂದ ಆರೋಗ್ಯಕ್ಕೆ ಮತ್ತು ದೇಹಕ್ಕೆ ನಿಯಮಿತ ವಿಶ್ರಾಂತಿ ಮತ್ತು ಸ್ವಯಂ ಆರೈಕೆ ಅತೀ ಮುಖ್ಯ. ವ್ಯಾಯಾಮ, ಯೋಗ, ವಾಕ್, ಸಂಗೀತ ಕೇಳುವುದು ಇಂತಹ ಸೃಜನಾತ್ಮಕ ಹವ್ಯಾಸಗಳನ್ನು ರೂಢಿಸಿಕೊಂಡರೆ ಒತ್ತಡವನ್ನು ನಿಯಂತ್ರಿಸಬಹುದು.