ಬೆಂಗಳೂರು: ಎಕ್ಸ್ ಖಾತೆಯಲ್ಲಿ ಬ್ಲೂ ಟಿಕ್ ಪಡೆಯಲು ಹಣ ಪಾವತಿಸಬೇಕಿದ್ದ ಪ್ರಕ್ರಿಯೆ ಇದೀಗ ಬದಲಾವಣೆಯಾಗಿದ್ದು, ಅತಿ ಹೆಚ್ಚು ಪಾಲೋವರ್ಸ್ ಹೊಂದಿರುವ ಖಾತೆಗೆ ಉಚಿತವಾಗಿ ಬ್ಲೂಟಿಕ್ ನೀಡಲು ಸಂಸ್ಥೆ ತೀಮರ್ಾನಿಸಿದೆ.
ಎಲೋನ್ ಮಸ್ಕ್ ಅವರ ಎಕ್ಸ್ (ಟ್ವಿಟರ್) ಪ್ಲಾಟ್ಫಾಮರ್್ ಕೆಲವು ಬಳಕೆದಾರರಿಗೆ ಉಚಿತವಾಗಿ ‘ಬ್ಲೂ ಟಿಕ್’ ನೀಡುತ್ತಿದೆ. ಇದರಿಂದ ಅನೇಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಏಕೆಂದರೆ, ಎಲೋನ್ ಮಸ್ಕ್ 2022ರಲ್ಲಿ ಟ್ವಿಟರ್ ಅನ್ನು ಖರೀದಿಸಿದ ನಂತರ, ಅವರು ಬಳಕೆದಾರರಿಗೆ ತಿಂಗಳಿಗೆ 8 ಡಾಲರ್ ಶುಲ್ಕ ವಿಧಿಸಿ, ಬ್ಲೂ ಟಿಕ್ ನೀಡಲು ಪ್ರಾರಂಭಿಸಿದ್ದರು.
ಬ್ಲೂ ಟಿಕ್ ವಿಶೇಷತೆ ಏನು?:
ಹೆಚ್ಚು ಫಾಲೋವಸರ್್ ಹೊಂದಿರುವವರಿಗೆ ಟ್ವಿಟರ್ ಪರಿಶೀಲನೆ ಬ್ಯಾಡ್ಜ್ ಅಡಿ ಬ್ಲೂ ಟಿಕ್ಗಳನ್ನು ನೀಡಲಾಗುತ್ತದೆ. ಇದು ಸಂಪೂರ್ಣ ಉಚಿತವಾಗಿದೆ. ಇದರೊಂದಿಗೆ ಸೆಲೆಬ್ರಿಟಿಗಳು, ಪ್ರಭಾವಿಗಳು ಮತ್ತು ರಾಜಕಾರಣಿಗಳ ಖಾತೆಗಳು ಬ್ಲೂಟಿಕ್ ಮಾಕರ್್ಗಳನ್ನು ಹೊಂದಿದ್ದವು. ಬಳಕೆದಾರರು ನೈಜ ಖಾತೆಗಳನ್ನು ಅನುಸರಿಸಬಹುದು. ಆದರೆ, 2022ರಲ್ಲಿ ಎಲೋನ್ ಮಸ್ಕ್ ಟ್ವಿಟರ್ ಅನ್ನು 44 ಬಿಲಿಯನ್ ಡಾಲರ್ಗಳಿಗೆ ಖರೀದಿಸಿದರು. ನಂತರ ಅವರು ಉಚಿತ ಬ್ಲೂ ಟಿಕ್ ನೀಡುವುದನ್ನು ನಿಲ್ಲಿಸಿದರು. ಬ್ಲೂ ಟಿಕ್ ಅನ್ನು ಬಯಸುವವರು ತಿಂಗಳಿಗೆ ಆರಂಭಿಕ ಶುಲ್ಕವಾಗಿ 8 ಡಾಲರ್ ಪಾವತಿ ಮಾಡಬೇಕಿತ್ತು.
ಹಣ ಪಾವತಿಸಬೇಕು ಎಂದು ಬ್ಲೂಟಿಕ್ ನಿರಾಕರಿಸಿದೊಡನೆ ಅನೇಕ ಸೆಲೆಬ್ರಿಟಿಗಳ ಬ್ಲೂಟಿಕ್ಸ್ ಮತ್ತು ಹೈ – ಪ್ರೊಫೈಲ್ ಖಾತೆಗಳು ಬ್ಲೂಟಿಕ್ ಕಳೆದುಕೊಂಡವು. ಇದರಿಂದ ಅದೇ ಹೆಸರಿನಲ್ಲಿ ಸಾಕಷ್ಟು ನಕಲಿ ಎಕ್ಸ್ ಖಾತೆಗಳು ಹುಟ್ಟಿಕೊಂಡಿವೆ. ನಕಲಿ ಖಾತೆಗಳನ್ನು ಸೃಷ್ಟಿಸಿದವರು ಹಣ ಪಾವತಿಸಿ ಬ್ಲೂ ಟಿಕ್ ಖರೀದಿಸಿದ್ದರು. ಇದರೊಂದಿಗೆ, ಬಳಕೆದಾರರು ನೈಜ ಮತ್ತು ನಕಲಿ ಖಾತೆಗಳ ನಡುವೆ ವ್ಯತ್ಯಾಸ ಕಂಡುಹಿಡಿಯಲು ಸಾಧ್ಯವಾಗದೇ ಗೊಂದಲಕ್ಕೊಳಗಾಗಿದ್ದರು.
ಪರಿಸ್ಥಿತಿ ಕೈ ಮೀರುತ್ತಿರುವ ಕಾರಣ ಎಲೋನ್ ಮಸ್ಕ್ ಯು – ಟನರ್್ ಹೊಡೆದಿದ್ದಾರೆ. 2,500 ಕ್ಕಿಂತ ಹೆಚ್ಚು ಫಾಲೋವಸರ್್ ಹೊಂದಿರುವ ಬಳಕೆದಾರರಿಗೆ ಉಚಿತ ಬ್ಲೂ ಟಿಕ್ ನೀಡಲಾಗುವುದು ಎಂದು ಈಗ ಮತ್ತೇ ಸ್ಪಷ್ಟಪಡಿಸಲಾಗಿದೆ. ಇದಲ್ಲದೇ, ಪ್ರೀಮಿಯಂ ವೈಶಿಷ್ಟ್ಯಗಳನ್ನು ಸಹ ಅವರಿಗೆ ಉಚಿತವಾಗಿ ನೀಡಲಾಗುವುದು. ಕಳೆದ ವಾರ 5,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಖಾತೆಗಳಿಗೆ ಪ್ರೀಮಿಯಂ ಜೊತೆಗೆ ಸೌಲಭ್ಯಗಳನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುವುದು ಎಂದು ಎಕ್ಸ್ ಸಂಸ್ಥೆ ತಿಳಿಸಿತ್ತು. ಇದೀಗ ಅದರ ಮಿತಿಯನ್ನು 2500 ಕ್ಕೆ ಇಳಿಸಿದೆ.