ನವದೆಹಲಿ: ಮಹಿಳೆಯೊಬ್ಬರು ತನ್ನ ಪತಿ ಲೈಂಗಿಕವಾಗಿ ದುರ್ಬಲವಾಗಿದ್ದಾರೆ, ಹೀಗಾಗಿ, ಆತನಿಂದ ತನಗೆ ಡೈವೋಸರ್್ ಬೇಕು ಎಂದು ಕೋಟರ್್ ಮೆಟ್ಟಿಲು ಏರಿದ್ದಾರೆ. ಆದರೆ, ಪತಿ ತಾನು ದುರ್ಬಲನಲ್ಲ ಎಂದು ಸಾಭೀತು ಪಡಿಸಲು ಪರೀಕ್ಷೆಗೆ ಸಜ್ಜಾಗಿದ್ದಾನೆ.
ಇಂತಹದ್ದೊಂದು ಘಟನೆ ಸುಪ್ರಿಂ ಮೆಟ್ಟಿಲೇರಿದ್ದು, ವಿಚ್ಛೇದನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತನ್ನ ಸಾಮಥ್ರ್ಯವನ್ನು ನಿರ್ಧರಿಸಲು ವೈದ್ಯಕೀಯ ಪರೀಕ್ಷೆಗೆ ಒಳಪಡುವ ಕುರಿತು ವ್ಯಕ್ತಿಯೋರ್ವ ಮಾಡಿದ ಮನವಿಗೆ ಸುಪ್ರೀಂ ಕೋಟರ್್ ಅನುಮತಿ ನೀಡಿದೆ. ಪತ್ನಿ ತನ್ನ ಪತಿ ದುರ್ಬಲ ಎಂದು ಹೇಳಿಕೊಂಡು ವಿಚ್ಛೇದನವನ್ನು ಕೋರಿದ್ದರು. ಇದರಿಂದ ಪತಿ ಈ ಮನವಿ ಮಾಡಿದ್ದರು.
2013ರಲ್ಲಿ ಚೆನ್ನೈನಲ್ಲಿ ವಿವಾಹವಾಗಿದ್ದ ದಂಪತಿ ಬ್ರಿಟನ್ನಲ್ಲಿ ವಾಸವಾಗಿದ್ದರು. ಏಳೂವರೆ ವರ್ಷಗಳ ಕಾಲ ಸಂತೋಷದಿಂದ ಒಟ್ಟಿಗೆ ಇದ್ದರು. ನಂತರ ಅವರ ಸಂಬಂಧದಲ್ಲಿ ಬಿರುಕು ಮೂಡಿ 2021ರ ಏಪ್ರಿಲ್ನಲ್ಲಿ ಬೇರ್ಪಟ್ಟರು. ಹೆಂಡತಿ ಪತಿಯೊಂದಿಗೆ ಎಲ್ಲ ಸಂಬಂಧ ಮುರಿದುಕೊಂಡಿದ್ದರು. ಬಳಿಕ ದಂಪತಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಲ್ಲಿ ಪತ್ನಿ ತನ್ನ ಪತಿ ದುರ್ಬಲ ಎಂದು ಹೇಳಿಕೊಂಡು ವಿಚ್ಛೇದನಕ್ಕೆ ಮನವಿ ಮಾಡಿದ್ದರು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋಟರ್್ಗೆ, ತನ್ನ ಸಾಮಥ್ರ್ಯವನ್ನು ನಿರ್ಧರಿಸಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಕೋರಿ ಪತಿ ಮನವಿ ಮಾಡಿದ್ದರು.
ನ್ಯಾಯಮೂತರ್ಿ ವಿಕ್ರಮ್ ನಾಥ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠವು, 2023ರ ಜೂನ್ 27ರಂದು ವಿಚಾರಣಾ ನ್ಯಾಯಾಲಯವು ನೀಡಿದ ಆದೇಶವನ್ನು ಕಾಪಾಡಿಕೊಳ್ಳಲು ನಾವು ಪ್ರಸ್ತುತ ಮೇಲ್ಮನವಿಗಳಿಗೆ ಭಾಗಶಃ ಅವಕಾಶ ನೀಡುತ್ತೇವೆ. ಏಕೆಂದರೆ, ಅದು ಮೇಲ್ಮನವಿದಾರ/ಪತಿಗೆ ಅವರ ಸಾಮಥ್ರ್ಯವನ್ನು ನಿರ್ಧರಿಸಲು ವೈದ್ಯಕೀಯ ಪರೀಕ್ಷೆಯನ್ನು ತೆಗೆದುಕೊಳ್ಳುವಂತೆ ನಿದರ್ೇಶಿಸುತ್ತದೆ. ಇಂದಿನಿಂದ ನಾಲ್ಕು ವಾರಗಳ ಅವಧಿಯಲ್ಲಿ ವಿಚಾರಣಾ ನ್ಯಾಯಾಲಯ ಸೂಚಿಸಿದ ರೀತಿಯಲ್ಲಿ ಪರೀಕ್ಷೆ ನಡೆಸಿ ಎರಡು ವಾರಗಳಲ್ಲಿ ವರದಿ ಸಲ್ಲಿಸಲಿ ಎಂದು ಸೂಚಿಸಿದೆ.
ಅದೇ ರೀತಿ ಪತಿಯು ತನ್ನ ಮಡದಿಯನ್ನು ಕೂಡ ಸಾಮಥ್ರ್ಯ ಪರೀಕ್ಷೆ ಹಾಗೂ ಮಾನಸಿಕ ಆರೋಗ್ಯ ತಪಾಸಣೆಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿಕೊಂಡಿದ್ದರು. ಆಗ ಎರಡೂ ಕಡೆಯವರಿಗೆ ಈ ಪರೀಕ್ಷೆಗಳನ್ನು ನಡೆಸಲು ಚೆನ್ನೈನ ರಾಜೀವ್ ಗಾಂಧಿ ಸಕರ್ಾರಿ ಜನರಲ್ ಆಸ್ಪತ್ರೆಯ ಡೀನ್ ವೈದ್ಯಕೀಯ ಮಂಡಳಿ ರಚಿಸಬೇಕು ಎಂಬ ಷರತ್ತಿನ ಮೇಲೆ ವಿಚಾರಣಾ ನ್ಯಾಯಾಲಯವು ಮಧ್ಯಂತರ ಅಜರ್ಿಗಳನ್ನು ಅನುಮತಿಸಿತ್ತು. ಪತ್ನಿಯನ್ನು ತಪಾಸಣೆಗೆ ಬಲವಂತ ಮಾಡುವಂತಿಲ್ಲ ಎಂದು ವಾದಿಸಿದ್ದ ಆಕೆಯ ಪರ ವಕೀಲರು ಸುಪ್ರೀಂ ಮೊರೆ ಹೋಗಿದ್ದರು. ಸುಪ್ರೀಂ ಕೋಟರ್್ ಪತಿಯ ತಪಾಸಣೆಗೆ ಅವಕಾಶ ನೀಡಿದ್ದು, ಪತ್ನಿಯ ಆರೋಗ್ಯ ತಪಾಸಣೆ ಕುರಿತಂತೆ ಯಾವುದೇ ನಿಖರವಾದ ತೀಮರ್ಾನಕ್ಕೆ ಬಂದಿಲ್ಲ.