ನಟ, ನಿರ್ಮಾಪಕ ಡಾಲಿ ಧನಂಜಯ್ ಅವರು ಇದೀಗ ತಂದೆಯಾಗುವ ಶುಷಿಯಲ್ಲಿದ್ದಾರೆ. ಡಾಲಿ ಅವರ ಪತ್ನಿ ಡಾ ಧನ್ಯತಾ ಗರ್ಭಿಣಿ ಆಗಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಧನ್ಯತಾ ಅವರು ಬೇಬಿ ಬಂಪ್ ಫೋಟೊಶೂಟ್ ಮಾಡಿಸಿದ್ದು, ಪತಿ ಡಾಲಿ ಸಹ ಪತ್ನಿಯ ಫೋಟೋಶೂಟ್ನಲ್ಲಿ ಜೊತೆಯಾಗಿದ್ದಾರೆ.
ಕೆಲ ತಿಂಗಳ ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದ ಡಾಲಿ ಧನಂಜಯ್ ತಂದೆಯಾಗುತ್ತಿರುವ ಖುಷಿಯ ಬಗ್ಗೆ ಮಾತನಾಡಿದ್ದರು. ಇದೊಂದು ಹೊಸ ಅನುಭವ ಎಂದು ಹೇಳಿಕೊಂಡಿದ್ದರು.

