ಬೆಂಗಳೂರು: ಪ್ರಜ್ವಲ್ ರೇವಣ್ಣ ಕೊನೆಗೂ ಪ್ರತ್ಯಕ್ಷವಾಗಿದ್ದು, ತನ್ನ ಪೆನ್ ಡರೈವ್ ಪ್ರಕರಣದ ಕುರಿತು ವಿಚಾರಣೆ ಎದುರಿಸಲು ಸಿದ್ಧವಾಗಿರುವುದಾಗಿ ವಿಡಿಯೋ ಬಿಡುಗಡೆ ಮೂಲಕ ತಿಳಿಸಿದ್ದಾರೆ.
ವಿದೇಶದಲ್ಲಿದ್ದುಕೊಂಡು ವಿಡಿಯೋ ಬಿಡುಗಡೆ ಮಾಡಿರುವ ಪ್ರಜ್ವಲ್ ವಿಡಿಯೋದಲ್ಲಿ ಹೇಳಿರುವುದಿಷ್ಟು:
ಮೊದಲನೆಯದಾಗಿ ನಾನು ಜೆಡಿಎಸ್ ಕಾರ್ಯಕರ್ತರು, ಪಕ್ಷದ ಮುಖಂಡರ ಕ್ಷಮೆ ಕೋರುತ್ತೇನೆ. ನಮ್ಮ ಕುಮಾರಣ್ಣ ನವರ ಕ್ಷಮೆ ಕೋರುತ್ತೇನೆ. ನನ್ನ ತಂದೆ, ತಾಯಿ ಮತ್ತು ತಾತನ ಕ್ಷಮೆ ಕೋರುತ್ತೇನೆ. ನಾನು ಈವರೆಗೆ ವಿದೇಶದಲ್ಲಿ ಎಲ್ಲಿದ್ದೆ ಎಂಬ ಬಗ್ಗೆ ಮಾಹಿತಿ ನೀಡದಿದ್ದ ಕಾರಣದಿಂದ ಈ ವಿಡಿಯೋ ಮಾಡುತ್ತಿದ್ದೇನೆ.
ನಾನು ಏ.೨೬ ರಂದು ವಿದೇಶಕ್ಕೆ ಬಂದಾಗ, ಯಾವುದೇ ಪ್ರಕರಣ ದಾಖಲಾಗಿರಲಿಲ್ಲ, ಎಸ್‌ಯಟಿ ಕೂಡ ರಚನೆಯಾಗಿರಲಿಲ್ಲ. ಹೀಗಾಗಿ, ಪೂರ್ವನಿಗದಿಯಾದ ವಿದೇಶ ಪ್ರಯಾಣ ಕೈಗೊಂಡೆ. ನಂತರ ಮರ‍್ನಾಲ್ಕು ದಿನದ ನಂತರ ಕಾಂಗ್ರೆಸ್‌ನ ಕೆಲ ಮುಖಂಡರು, ರಾಹುಲ್ ಗಾಂಧಿ ಸೇರಿ ಕೆಲವರು, ಬಹಿರಂಗ ವೇದಿಕೆಯಲ್ಲಿ ನನ್ನ ವಿರುದ್ಧ ರಾಜಕೀಯ ಷಡ್ಯಂತ್ರದ ಹೇಳಿಕೆ ನೀಡಿದಾಗ ನನಗೆ ಇದರ ಗಂಭೀರತೆ ಅರ್ಥವಾಯಿತು.
ಪ್ರಕರಣದ ಗಂಭೀರತೆಯನ್ನು ಕಂಡು, ನಾನು ಡಿಪ್ರೆಷನ್‌ಗೆ ಹೋದೆ, ಐಸೋಲೇಟ್ ಆಗಿದ್ದೆ. ಅದೇ ರೀತಿ ಹಾಸನದಲ್ಲಿ ಕೆಲವರು ನನ್ನನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆಲ್ಲ ಉತ್ತರ ಕೊಡಲು ನಾನು ಮೇ ೩೧ ರಂದು ಎಸ್‌ಐಟಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸುತ್ತೇನೆ. ಧನ್ಯವಾದಗಳು ಎಂದಿದ್ದಾರೆ.