ಬೆಂಗಳೂರು: ಪ್ರಜ್ವಲ್ ರೇವಣ್ಣ ವಿಡಯೋ ಬಿಡುಗಡೆ ಮಾಡಿ, ಎಸ್‌ಐಟಿ ಮುಂದೆ ಮೇ. 31 ಕ್ಕೆ ಹಾಜರಾಗುತ್ತೇನೆ ಎನ್ನುತ್ತಿದ್ದಂತೆ ಏರ್‌ಪೋರ್ಟ್ಗಳಲ್ಲಿ ಎಸ್‌ಐಟಿ ಅಲರ್ಟ್ ಆಗಿದೆ.
ಮೇ.31 ರ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಹಾಗಾದರೆ, ಅವರು ಶುಕ್ರವಾರಕ್ಕೆ ಮೊದಲೇ ಬೆಂಗಳೂರಿಗೆ ಬರಬೇಕಾದ ಅನಿವಾರ್ಯತೆ ಇದೆ. ವಿದೇಶದಿಂದ ನೇರವಾಗಿ ವಿಚಾರಣೆಗೆ ಹಾಜರಾಗುವುದು ಸುಲಭವಲ್ಲ. ಹೀಗಾಗಿ, ಮೊದಲೇ ಅವರು ವಿಮಾನ ನಿಲ್ದಾಣಕೆಕ ಬರುಬಹುದು ಎಂದು ಎಸ್‌ಐಟಿ ಅಧಿಕಾರಿಗಳು ಅವರ ಬಂಧನಕ್ಕೆ ಸಜ್ಜಾಗುತ್ತಿದ್ದಾರೆ.
ಪ್ರಜ್ವಲ್ ರೇವಣ್ಣ ಎಸ್‌ಐಟಿ ಮುಂದೆ ಹಾಜರಾಗುವ ಮೊದಲು, ಮನೆಯವರನ್ನು ಭೇಟಿಯಾಗಿ, ವಲೀಕರನ್ನು ಭೇಟಿಯಾಗಿ ಬರುವುದಕ್ಕೆಲ್ಲ ಅವಕಾಶ ನೀಡಬಾರದು ಎಂದು ಎಸ್ ಐಟಿ ತೀರ್ಮಾನಿಸಿದೆ. ಹೀಗಾಗಿ, ಅವರು ವಿಮಾನ ನಿಲ್ದಾಣಕ್ಕೆ ಬಂದಾಗಕೇ ಬಂಧನಕ್ಕೊಳಡಪಸಿ, ವಶಕ್ಕೆ ಪಡೆಯಲು ಎಸ್‌ಐಟಿ ಸಜ್ಜಾಗಿದೆ.
ಈ ನಡುವೆ ಎಸ್‌ಐಟಿ ವಿಡಿಯೋ ಜಾಡನ್ನು ಹಿಡಿದು ತನಿಖೆ ಆರಂಭಿಸಿದೆ. ನಾನು ಈವರೆಗೆ ಯಾವ ದೇಶದಲ್ಲಿದ್ದೆ ಎಂಬ ಬಗ್ಗೆ ನಿಮಗೆಲ್ಲ ತಿಳಿಸದಿರುವುದಕ್ಕೆ ಕ್ಷಮೆ ಕೋರುತ್ತೇನೆ ಎನ್ನುತ್ತಲೇ ವಿಡಿಯೋ ಆರಂಭಿಸಿದ್ದರೂ, ಇಡೀ ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ ತಾನು ಎಲ್ಲಿದ್ದೇನೆ ಎಂಬ ಬಗ್ಗೆ ಉಲ್ಲೇಖ ಮಾಡಿಲ್ಲ. ಹೀಗಾಗಿ, ಆ ವಿಡಿಯೋ ಎಲ್ಲಿಂದ ಬಿಡುಗಡೆಯಾಗಿದೆ ಎಂಬುದನ್ನು ತನಿಖೆ ನಡೆಸಲು ಎಸ್‌ಯಟಿ ಸಜ್ಜಾಗಿದೆ.
ವಿದೇಶದಿಂದ ಆಗಮನಿಸುವ ವಿಚಾರದಲ್ಲಿ ಈಗಾಗಲೇ ಪ್ರಜ್ವಲ್ ರೇವಣ್ಣ ಎರಡು ಮೂರು ಬಾರಿ ಸುಳ್ಳು ಹೇಳಿದ್ದಾರೆ. ಎರಡು ಬಾರಿ ಟಿಕೆಟ್ ಬುಕ್ ಮಾಡಿ, ಕ್ಯಾನ್ಸಲ್ ಮಾಡಿಸಿದ್ದಾರೆ. ಹೀಗಾಗಿ, ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಎಸ್‌ಐಟಿಗೆ ಅನುಮಾನ ಮೂಡಿದೆ. ಆದರೆ, ಅವರನ್ನು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಬಂಧನ ಮಾಡಬೇಕು ಎಂಬುದು ಎಸ್‌ಐಟಿಯ ಗುರಿಯಾಗಿದೆ.