ವಿಜಯಪುರ ಜಿಲ್ಲೆಯ ಇಂಡಿ ನಗರದ ರೈತ ಮಹಿಳೆ ಶ್ರೀಮತಿ ರಾಜಶ್ರೀ ಅನಂತ ಜೈನ್ ಅವರು ಅತ್ಯಂತ ದುಬಾರಿ ಬೆಲೆಯ ಮಿಯಾಝಕಿ ತಳಿಯ ಮಾವಿನ ಹಣ್ಣುಗಳನ್ನು ಯಶಸ್ವಿಯಾಗಿ ಬೆಳೆದು ಗಮನ ಸೆಳೆದಿದ್ದಾರೆ.
ಜಪಾನ್ ಮೂಲದ ಈ ತಳಿಯನ್ನು ಆಂಧ್ರ ಪ್ರದೇಶದ ರಾಜಮಂಡ್ರಿಯಿಂದ ಒಂದು ಸಸಿಗೆ ರೂ. 10 ಸಾವಿರದಂತೆ 25 ಗಿಡಗಳಿಗೆ ಸುಮಾರು ₹2.5 ಲಕ್ಷ ಹೂಡಿಕೆ ಮಾಡಿ ಆರಂಭಿಸಿದ ಇವರ ಪ್ರಯತ್ನ, ಇಂದು ಲಕ್ಷಾಂತರ ಆದಾಯ ನೀಡುತ್ತಿರುವುದಾಗಿ ತಿಳಿಸಿದರು.

