ಉಪಯುಕ್ತ ಕ್ರೀಡೆ ಸುದ್ದಿ

ಕನ್ನಡ್ ಅಲ್ಲ….ಕನ್ನಡ ಅಂದಿದ್ದೆ ಮುಳುವಾಯ್ತಾ?ರಾಹುಲ್ ಡ್ರಾಪ್ ಹಿಂದಿದೆಯಾ ಹಿಂದಿ ಲಾಭಿ

Share It

ಬೆಂಗಳೂರು: ಐಪಿಎಲ್ ಆರಂಭಕ್ಕೂ ಮುಂಚೆ ಒಂದು ವಿಡಿಯೋ ಬಂದಿತ್ತು, ಅದರಲ್ಲಿ ಕೆ.ಎಲ್.ರಾಹುಲ್ ಸಹಾಯಕನಿಗೆ ಅದು ಕನ್ನಡ್ ಅಲ್ಲ, ಕನ್ನಡ ಎಂದು ಹೇಳಿದ್ದರು. ಇದು ಕನ್ನಡಿಗರನ್ನು ರೋಮಾಂಚನಗೊಳಿಸಿತ್ತು.

ಅದೊಂದು ವಿಡಿಯೋ ಕೆ.ಎಲ್. ರಾಹುಲ್ ಟೀಂ ಇಂಡಿಯಾಗೆ ಆಯ್ಕೆಯಾಗದಿರಲು ಕಾರಣವಾಯ್ತೇ? ಎಂಬ ಅನುಮಾನ ಮೂಡುತ್ತಿದೆ. ಅಷ್ಟಕ್ಕೂ ಆ ವಿಡಿಯೋ ಅವರನ್ನು ತಂಡದಿAದ ಹೊರಗುಳಿಯುವಂತೆ ಮಾಡಿದ್ಯಾಕೆ ಎಂದು ನೋಡುವುದಾದರೆ, ಬಿಸಿಸಿಐ ಬಾಸ್‌ಗಳ ಹಿಂದಿ ಪ್ರೇಮ ಎದ್ದು ಕಾಣುತ್ತದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಅವರ ತಂದೆ ಅಮಿತ್ ಶಾ ಹಿಂದಿ ಹೇರಿಕೆಗೆ ಅದೆಷ್ಟು ಪ್ರಾಮುಖ್ಯತೆ ನೀಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಹಿಂದಿ ಹೇರಿಕೆ ವಿರುದ್ಧ ಮಾತನಾಡಿದ ರಾಹುಲ್‌ಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶ್ವಕಪ್ ಟಿ-೨೦ ಅಭಿಯಾನಕ್ಕೆ ಮತ್ತೊಮ್ಮೆ ಕನ್ನಡಿಗರಿಲ್ಲದ ತಂಡವನ್ನು ಆಯ್ಕೆ ಮಾಡಿರುವ ಬಿಸಿಸಿಐ ಕೆ.ಎಲ್. ರಾಹುಲ್ ಸೇರಿ ಯಾವೊಬ್ಬ ಕನ್ನಡಿಗನ್ನು ಪರಿಗಣಿಸಿಲ್ಲ. ಮುಂಬೈ ಲಾಭಿ ಭಾರತೀಯ ಕ್ರಿಕೆಟ್‌ಗೆ ಕಾಲಿಟ್ಟಾಗಲೆಲ್ಲ ಕನ್ನಡಿಗರನ್ನು ಕಡೆಗಣಿಸುವುದು ನಡೆದುಕೊಂಡೇ ಬಂದಿದೆ. ಇದೀಗ ಅದೇ ಮಾದರಿ ಮುಂದುವರಿದಿದ್ದು, ಅಜಿತ್ ಅಗರ್‌ಕರ್ ನೇತೃತ್ವದ ಆಯ್ಕೆ ಸಮಿತಿ ಕನ್ನಡಿಗರಿಲ್ಲದ ತಂಡವನ್ನು ಆಯ್ಕೆ ಮಾಡಿದೆ. ಮುಂಬರುವ ವಿಶ್ವಕಪ್ ಪಂದ್ಯಾವಳಿ ವೆಸ್ಟ್ ಇಂಡೀಸ್ ಮತ್ತು ಅಮೇರಿಕದಲ್ಲಿ ನಡೆಯಲಿದೆ. ರೋಹಿತ್ ಶರ್ಮಾಗೆ ನಾಯಕತ್ವ ಪಟ್ಟ ಉಳಿಸಿಕೊಂಡಿದ್ದಾರೆ.

ಉತ್ತಮ ಲಯದಲ್ಲಿದ್ದರೂ ಕನ್ನಡಿಗ ಕೆ.ಎಲ್.ರಾಹುಲ್‌ಗೆ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಐಪಿಎಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿರುವ ರಾಹುಲ್ ೩೫೦ಕ್ಕೂ ಅಧಿಕ ರನ್ ಕಲೆ ಹಾಕಿ ಮುಂಚೂಣಿಯಲ್ಲಿದ್ದರು. ಕರ್ನಾಟಕದಿಂದ ಕೆ.ಎಲ್.ರಾಹುಲ್ ವಿಶ್ವಕಪ್ ತಂಡದಲ್ಲಿ ಆಡಿಯೇ ಆಡುತ್ತಾರೆ ಎಂಬುದು ಬಹುತೇಕ ಅಭಿಮಾನಿಗಳ ಆಸೆಯಾಗಿತ್ತು. ಆದರೆ, ಅವರಿಗೆ ನಿರಾಸೆಯಾಗಿದೆ. ಇದರಿಂದ ನಿರಾಶರಾದ ರಾಹುಲ್ ತಮ್ಮ ಇಸ್ಟಾಗ್ರಾಂ ಖಾತೆಯಲ್ಲಿ ಸೈಲೆಂಟ್ ಇಸ್ ಬೆಸ್ಟ್ ಆನ್ಸರ್ ಫಾರ್ ಎವೆರಿ ಕೊಶ್ಚನ್, ಸ್ಮೆöÊಲ್ ಇಸ್ ಬೆಸ್ಟ್ ರಿಯಾಕ್ಷನ್ ಫಾರ್ ಎವೆರಿ ಸಚ್ಯುವೇಷನ್ ಎಂದು ಬರೆದುಕೊಂಡಿದ್ದಾರೆ.

ರಾಹುಲ್ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ತಮ್ಮ ಕನ್ನಡ ಪ್ರೇಮ ಮೆರೆಯುತ್ತಾರೆ. ಕನ್ನಡಿಗರನ್ನು ಆಯ್ಕೆ ಮಾಡುವಲ್ಲಿಯೂ ಕೆಲವೊಮ್ಮೆ ಕೆಲಸ ಮಾಡುತ್ತಾರೆ. ಜತೆಗೆ, ಟೀಂ ಇಂಡಿಯಾದಲ್ಲಿ ಆಡುವಾಗಲೂ, ಕನ್ನಡಿಗರ ಜತೆಗೆ ಕನ್ನಡದಲ್ಲೇ ಮಾತನಾಡಿ, ಆ ವಿಡಿಯೋ ವೈರಲ್ ಆಗಿರುವುದನ್ನು ನಾವು ಹಿಂದೆ ಕಾಣಬಹುದು. ಇದನ್ನೇ ಮುಂದುವರಿಸಿದ ರಾಹುಲ್, ಜಾಹೀರಾತೊಂದರ ಶೂಟಿಂಗ್‌ಗೆ ಕನ್ನಡದ ಸ್ಟಿçಪ್ಟ್ ಕೊಟ್ಟ ಸಹಾಯಕ, ಕನ್ನಡ್ ಎಂದು ಉಚ್ಛಾರಿಸುತ್ತಾನೆ. ಅದನ್ನು ಸರಿಪಡಿಸುವ ರಾಹುಲ್ ಕನ್ನಡ್ ಅಲ್ಲ ಕನ್ನಡ ಎಂದು ಸರಿಪಡಿಸುತ್ತಾರೆ. ಇದು ಹಿಂದಿ ಹೇರಿಕೆ ವಿರುದ್ಧದ ಮೊದಲ ನಡೆ ಎಂಬುದು ಮೊದಲಿಂದಲೂ ಚಾಲ್ತಿಯಲ್ಲಿದೆ.

ಈ ವಿಡಿಯೋದಲ್ಲಿ ಹಿಂದಿ ಹೇರಿಕೆಯಂತಹ ಸೂಕ್ಷö್ಮ ವಿಚಾರವನ್ನು ಕೈಗೆತ್ತಿಕೊಂಡ ಕಾರಣಕ್ಕೆ ಕೆ.ಎಲ್. ರಾಹುಲ್ ತಂಡದಲ್ಲಿ ಸ್ಥಾನ ಕಳೆದುಕೊಳ್ಳಬೇಕಾಗಿದೆ. ಹಿಂದಿ ವಿರುದ್ಧ ಮಾತನಾಡುವವರನ್ನು ಸದಾ ಕಾಲ ತುಳಿಯಲು ಯತ್ನಿಸುವ ಅಮಿತ್ ಶಾ, ಜಯ್ ಶಾ ರಂತಹ ಬಿಸಿಸಿಐ ಬಾಸ್‌ಗಳು ಇಂತಹದ್ದಕ್ಕೆ ಅವಕಾಶ ಕೊಡುತ್ತಾರಾ? ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್‌ಕರ್ ಕೂಡ ಇಂತಹ ಹಿಂದಿ ಅಭಿಮಾನವಿರುವ ವ್ಯಕ್ತಿ. ಹೀಗಾಗಿ, ರಾಹುಲ್‌ಗೆ ಹಿಂದಿ ಹೇರಿಕೆ ವಿರುದ್ಧದ ಸಣ್ಣ ನಡೆಯೇ ಕಾರಣವಾಯ್ತಾ? ಎಂಬುದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ.


Share It

You cannot copy content of this page