ಪುಣೆ : ಚಿಂತಕ ನರೇಂದ್ರ ದಾಭೋಲ್ಕರ್ ಹಂತಕರನ್ನು ಅಪರಾಧಿಗಳೆಂದು ಘೊಷಿಸಿರುವ ನ್ಯಾಯಾಲಯ ಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್‌ಗೆ ಜೀವಾವಧಿ ಶಿಕ್ಷೆ ಹಾಗೂ ಐದು ಲಕ್ಷ ರು. ದಂಡ ವಿಧಿಸಿ ಆದೇಶಿಸಿದೆ.
ದಾಬೋಲ್ಕರ್ ಹತ್ಯೆ ರಾಷ್ಟೀಯ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ಎಡಬಂಥೀಯ ಚಿಂತನೆಗಳುಳ್ಳ ವಿಚಾರವಾಧಿಗಳ ಕೊಲೆ ಮಾಡುವುದಾಗಿ ಪದೇಪದೆ ಬೆದರಿಕೆ ಪತ್ರಗಳು ಬರುತ್ತಿದ್ದವು. ರಾಜ್ಯದಲ್ಲಿ ಕೂಡ ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಗೂ ದಾಬೋಲ್ಕರ್ ಹತ್ಯೆಗೂ ನಂಟಿರುವ ಅನುಮಾನ ವ್ಯಕ್ತವಾಗಿತ್ತು.
ಪ್ರಕರಣದಲ್ಲಿ ವೀರೇಂದ್ರ ತಾವ್ಡೆ, ಸಂಜೀವ್ ಪುನೋಲ್ಕರ್, ವಿಕ್ರಮ್ ಭಾವೆ, ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ಅವರನ್ನು ಬಂಧಿಸಿದ್ದ ಮಹಾರಾಷ್ಟ್ರ ಪೊಲೀಸರು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯ ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ಅವರಿಗೆ ಜೀವಾವಧಿ ಶಿಕ್ಷೆ ಮತ್ತು ಐದು ಲಕ್ಷ ರೂಪಾಯಿ ದಂಡ ವಿಧಿಸಿದೆ.
ಉಳಿದ ಆರೋಪಿಗಳನ್ನು ನಿರಪರಾಧಿಗಳೆಂದು ತೀರ್ಮಾನಿಸಿ, ಖುಲಾಸೆಗೊಳಿಸಲಾಗಿದೆ. ನರೇಂದ್ರ ದಾಬೋಲ್ಕರ್ ಪುತ್ರ ಡಾ.ಹಮೀದ್, ಈ ತೀರ್ಪನ್ನು ಸ್ವಾಗತಿಸುತ್ತಲೇ ಖುಲಾಸೆಗೊಂಡಿರುವ ಮೂವರ ವಿರುದ್ಧ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ. ಜತೆಗೆ, ವಿಚಾರವಾದಿಗಳಿಗೆ ಬೆದರಿಕೆ ಇನ್ನೂ ಮುಗಿದಿಲ್ಲ. ಪ್ರರಕಣದ ಮುಖ್ಯ ರುವಾರಿಯನ್ನು ಬಂಧಿಸಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.