ಬೆಂಗಳೂರು: ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವೈರಲ್ ಆದ ವಿಡಿಯೋಗಳನ್ನು ಫೇಸ್‌ಬುಕ್ ಪೇಜ್‌ನಲ್ಲಿ ಅಪ್ಲೋಡ್ ಮಾಡಿದ್ದ ಒಬ್ಬ ಅಡ್ಮಿನ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ಅವರನ್ನು ಬಂಧಿಸಿದ್ದ ಎಸ್‌ಐಟಿ ಪೊಲೀಸರು, ವಿಡಿಯೋಗಳನ್ನು ಶೇರ್ ಮಾಡದಂತೆ, ಅಪ್ಲೋಡ್ ಮಾಡದಂತೆ ಸೂಚನೆ ನೀಡಿದ್ದರು. ವಿಡಿಯೋ ಶೇರ್ ಮಾಡಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವ ಸೂಚನೆ ನೀಡಿದ್ದರು.
ಎಸ್‌ಐಟಿ ನಿಯಮ ಮೀರಿ ಪೇಸ್‌ಬುಕ್ ಪುಟದಲ್ಲಿ ವಿಡಿಯೋ ಮತ್ತು ಅಶ್ಲೀಲ ಫೋಟವನ್ನು ಹಂಚಿದ ಆರೋಪದಲ್ಲಿ ಸೈಬರ್ ಪೊಲೀಸರು ಆರೋಪಿಯನ್ನು ಗುರುತಿಸಿದ್ದರು. ಆತನನ್ನು ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಬಂಧನ ಮಾಡಲಾಗಿದ್ದು, ಆತನನ್ನು ಎಸ್‌ಐಟಿ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.