ನವಲಗುಂದ : ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಮತಯಾಚನೆಗೆ ಪಟ್ಟಣದ ಗಣಪತಿ ಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಘ್ನೇಶ್ವರನ ದರ್ಶನ ಪಡೆದು ನಂತರ ರೋಡ್ ಶೋ ಕಾರ್ಯಕ್ರಮಕ್ಕೆ ಸಚಿವ ಸಂತೋಷ ಲಾಡ ಸಮ್ಮೂಖದಲ್ಲಿ ಚಾಲನೆ ನೀಡಲಾಯಿತು.
ಪಟ್ಟಣದ ವಿನಾಯಕಪೇಟ್, ಗಾಂಧಿ ಮಾರುಕಟ್ಟೆ, ತಿಪ್ಪಯ್ಯನ ಕೂಟ್, ಹುಗ್ಗಿ ಓಣಿ, ರಾಮಲಿಂಗ ಓಣಿ, ಗ್ರಾಮದೇವಿ ಕೂಟ್, ಚಾವಡಿ, ಕಳ್ಳಿಮಠ ಓಣಿ, ತೆಗ್ಗಿನಕೇರಿ ಓಣಿ, ಲಿಂಗರಾಜ ಸರ್ಕಲ್ ನಂತರ ಗಾಂಧಿ ಮಾರುಕಟ್ಟೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರವಾಗಿ ರೂಡ್ ಶೋ ಸಚಿವ ಸಂತೋಷ ಲಾಡ್ ಮಾತನಾಡಿದ್ದರು ಶಾಸಕ ಎನ್ ಎಚ್ ಕೋನರೆಡ್ಡಿ ಅವರ ಚಕ್ಕಡಿ ರಸ್ತೆ ಮಾಡಿದ್ದಾರೆ ಮಾತಿನಲ್ಲಿ ಹಾಡಿ ಹೊಗಳಿದ್ದರು ಮರಿ ಟಗರು ಬರುತ್ತೆ ಒಂದು ಬಾರಿ ನಮಗೆ ಅವಕಾಶ ಕೊಡಿ
ಈ ವೇಳೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ರೋಡ್ ಶೋದಲ್ಲಿ ಜಗ್ಗಲಿಗೆ ಡೊಳ್ಳುಪದಗಳ ಮೂಲಕ ಮೆರವಣಿಗೆಗೆ ಮೆರಗು ತಂದರು. ಇನ್ನು ದಾರಿಯುದ್ದಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂಬ ಘೋಷಣೆಗಳು ಕೂಗುತ್ತಾ ಪಕ್ಷದ ಬಾವುಟಗಳು ರಾರಾಜಿಸುತ್ತಿದ್ದವು.
ರೋಡ್ ಶೋದಲ್ಲಿ ವರ್ಧಮಾನಗೌಡ ಹಿರೇಗೌಡರ, ಮಂಜು ಮಾಯಣ್ಣವರ, ಮಾಂತೇಶ ಭೋವಿ, ಮಂಜು ಜಾಧವ, ಜೀವನ ಪವಾರ, ಮೋದಿನ್ ಸಾಬ್ ಶಿರೂರು, ಸುರೇಶ ಮೇಟಿ, ಪ್ರಕಾಶ್ ಶಿಗ್ಲಿ, ವಿಜಯಪ್ಪಗೌಡ ಪಾಟೀಲ, ಡಿ.ಕೆ.ಹಳ್ಳದ, ಕಿರಣ್ ಉಳ್ಳಿಗೇರಿ, ಈರಣ್ಣ ಶಿಡಗಂಟಿ, ಹುಸೇನಬಿ ಧಾರವಾಡ, ಏಕನಾಥ ಜಾಧವ, ಲೋಕಾಪೂರಿ, ಹನಮಂತಪ್ಪ ಕುಕನೂರ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.