ಬೆಂಗಳೂರು:ದಕ್ಷಿಣ ರಷ್ಯಾ ಮೇಲೆ ಡ್ರೋನ್ ದಾಳಿ ನಡೆಸಿದ ಉಕ್ರೇನ್ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟ ರಷ್ಯಾ ಪಡೆ, ಪ್ರತಿಕಾರವಾಗಿ ಉಕ್ರೇನ್ ನ ನಗರಗಳ ಮೇಲೆ ರಾತ್ರೋರಾತ್ರಿ ಕ್ಷೀಪಣಿಗಳ ದಾಳಿ ನಡೆಸಿದೆ.
ಉಕ್ರೇನ್ ದೇಶದ ಇಂಧನ ಪೂರೈಕೆ ಸೇರಿದಂತೆ ಮೂಲಸೌಕರ್ಯ ವನ್ನು ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಈ ದಾಳಿಯನ್ನು ಸಂಘಟಿಸಲಾಗಿದೆ. ಈ ನಡುವೆ ಕಸ್ನೋದರ್ ಮೇಲೆ ಇಸ್ರೇಲ್ ನ 66 ಡ್ರೋನ್ ಗಳು ದಾಳಿ ಮಾಡಿದ್ದು, ಅವುಗಳನ್ನೆಲ್ಲ ರಷ್ಯನ್ ಸೇನೆ ಹೊಡದುರುಳಿಸಿದೆ.
ರಷ್ಯಾ ಸ್ವಾಧೀನಕ್ಕೆ ಪಡೆದಿರುವ ಕ್ರಿಮಿಯಾ ದ್ವೀಪವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ ಎರಡು ಡ್ರೋನ್ ಗಳನ್ನು ರಷ್ಯಾ ಸೇನೆ ನಾಶಪಡಿಸಿದೆ ಎಂದು ರಷ್ಯಾ ಹೇಳಿಕೊಂಡಿದೆ. ಉಕ್ರೇನ್ ಕೂಡ ರಷ್ಯಾದ ತೈಲ ಪೂರೈಕೆ ಕೇಂದ್ರಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ. ಆದರೆ, ಈವರೆಗೆ ಯಾವುದೇ ಸಾವು ನೋವು ಸಂಬಂವಿಸಿಲ್ಲ ಎಂದು ವರದಿಯಾಗಿದೆ.