ವೈಟ್ ಹೌಸ್: ರಾಗಿ ತಿಂದವನಿಗೆ ರೋಗವಿಲ್ಲ ಎನ್ನುವ ಮಾತು ಬಹಳ ಹಿಂದಿನಿಂದಲು ನಮ್ಮ ಹಿರಿಯರು ಹೇಳುವ ಮಾತು. ರಾಗಿ ತಿನ್ನುವುದರಿಂದ ಅನೇಕ ಉಪಯೋಗಗಳಿವೆ. ರೋಗ ನಿರೋಧಕ ಶಕ್ತಿ ಹೊಂದಿರುವ ಆಹಾರಗಳಲ್ಲಿ ರಾಗಿಯೂ ಒಂದು.
ಮೊದಲೆಲ್ಲಾ ನಮ್ಮ ಹಿರಿಯರು ರಾಗಿಯನ್ನು ಪ್ರತಿ ನಿತ್ಯ ತಪ್ಪದೆ ಉಪಯೋಗಿಸುತ್ತಿದ್ದರು. ಇದರಿಂದ ಹಿಂದಿನ ಕಾಲದಲ್ಲಿ ಯಾರು ಕೂಡ ಹೆಚ್ಚಾಗಿ ಆರೋಗ್ಯ ಸಮಸ್ಯೆಯನ್ನು ಹೆದುರಿಸುತ್ತಿರಲಿಲ್ಲ. ಜತೆಗೆ ಎಲ್ಲರೂ ಒಳ್ಳೆಯ ಆಹಾರಗಳನ್ನು ಸೇವಿಸುತ್ತಿದ್ದರಿಂದ ಗಟ್ಟಿಮುಟ್ಟಾಗಿದ್ದರು ಕೂಡ.
ಇಂದು ಕಾಲ ಬದಲಾಗಿದೆ ಓಡುತ್ತಿರುವ ಸಮಯದೊಂದಿಗೆ ತಕ್ಕಂತೆ ಓಡಲು ನಾವುಗಳು ಫಾಸ್ಟ್ ಆಗಿ ಎನು ಸಿಗುತ್ತೊ ಅಂತಹದನ್ನು ತಿಂದು ಕೊನೆಗೆ ಆರೋಗ್ಯದಲ್ಲಿ ಆ ಸಮಸ್ಯೆ ಈ ಸಮಸ್ಯೆ ಎಂದು ಒದ್ದಾಡುವಂತಾಗಿದೆ.
ಇನ್ನು ಈ ಬೇಸಿಗೆ ಕಾಲಕ್ಕು ಸಹ ರಾಗಿ ಒಂದು ಸೂಪರ್ ಆಹಾರ ಎಂದೇ ಹೇಳಬಹುದು, ರಾಗಿಯಲ್ಲಿ ಆರೋಗ್ಯಕರವಾದ ಜೀವಸತ್ವಗಲಾದ ಕಬ್ಬಿಣ, ಕ್ಯಾಲ್ಸಿಯಂ, ಆಂಟಿಆಕ್ಸಿಡೆಂಟ್‍ಗಳು, ಬಿ ಕಾಂಪ್ಲೆಕ್ಸ್, ಸತು, ಫೈಬರ್, ಪ್ರೋಟೀನ್‍ನಂತಹ ಪೋಷಕಾಂಶಗಳು ಹೆಚ್ಚಾಗಿವೆ.
ರಾಗಿಯನ್ನು ಪ್ರತಿದಿನದ ಆಹಾರದಲ್ಲಿ ಅನೇಕ ರೂಪದಲ್ಲಿ ಉಪಯೋಗಿಸಬಹುದು, ರಾಗಿ ರೊಟ್ಟಿ, ರಾಗಿ ಮುದ್ದೆ, ರಾಗಿ ದೋಸೆ, ರಾಗಿ ಇಡ್ಲಿ ಈಗೆಲ್ಲಾ ಅನೇಕ ರೀತಿಯಲ್ಲಿ ರಾಗಿಯನ್ನು ಬಳಸಿ ಆಹಾರ ತಯಾರಿಸಬಹದು.
ಈ ಬೇಸಿಗೆಯಲ್ಲಿ ಅತಿಯಾದ ಮಸಾಲೆಯುಕ್ತ ಆಹಾರಗಳನ್ನು ತಿನ್ನುವಬದಲು ರಾಗಿ ಅಂಬಲಿಯನ್ನು ಪ್ರತಿ ದಿನ ಸೇವನೆ ಮಾಡಿದರೆ ಒಳ್ಳೆಯದು. ರಾಗಿಯಲ್ಲಿ ಫೈಬರ್ ಮತ್ತು ಪ್ರೊಟೀನ್ ಹೆಚ್ಚಾಗಿರುವುದರಿಂದ ರಾಗಿಯಿಂದ ಅಂಬಲಿ ಮಾಡಿ ಕುಡಿದರೆ ದೇಹ ತಂಪಾಗಿ ಇರುತ್ತದೆ. ಹೆಚ್ಚು ಕಾಲ ಹಸಿವಾಗುದಿಲ್ಲ ಕೂಡ.
ರಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ , ಜತೆಗೆ ರಾಗಿ ಅಂಬಲಿಯನ್ನು ಪ್ರತಿ ದಿನ ಬೆಳಗ್ಗೆ ಸೇವಿಸುವದರಿಂದ ಸುಲಭವಾಗಿ ತೂಕವನ್ನು ಕಡಿಮೆ ಮಾಡಬಹುದು. ಪ್ರತಿ ದಿನದ ಆಹಾರ ಪದ್ಧತಿಯಲ್ಲಿ ರಾಗಿಯನ್ನು ಬಳಸುವುದರಿಂದ ದೇಹಕ್ಕೂ ಒಳ್ಳೆಯದು, ಆರೋಗ್ಯಕ್ಕು ಒಳ್ಳೆಯದು ಸೋ ರಾಗಿ ತಿನ್ನಿ ರೋಗದಿಂದ ದೂರವಿರಿ.