ಉಪಯುಕ್ತ ಸುದ್ದಿ

ಶ್ರೀರಂಗಪಟ್ಟಣ ಕೋಟೆಯಲ್ಲಿ ಜೋಡಿ ನೆಲಮಾಳಿಗೆಗಳು ಪತ್ತೆ

Share It

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಐತಿಹಾಸಿಕ ಜೋಡಿ ನೆಲಮಾಳಿಗೆಗಳು ಪತ್ತೆಯಾಗಿವೆ. ಪಟ್ಟಣದ ದಕ್ಷಿಣ ಭಾಗದ ಎರಡು ಮತ್ತು ಮೂರನೇ ಸುತ್ತಿನ ಕೋಟೆಯ ನಡುವೆ ಕಂದಕಕ್ಕೆ ಹೊಂದಿಕೊಂಡಂತೆ ನೆಲಮಾಳಿಗೆಗಳು ಕಂಡುಬಂದಿವೆ.

ಮುಳ್ಳು ಗಂಟಿಗಳಿಂದ ಮುಚ್ಚಿಹೋಗಿದ್ದ ಈ ನೆಲಮಾಳಿಗೆಗಳನ್ನು ಐತಿಹಾಸಿಕ ಸಂಶೋಧಕರಾದ ಮೈಸೂರಿನ ಹರ್ಷವರ್ಧನ್ ಮತ್ತು ಗುರುಪ್ರಸಾದ್ ನೇತೃತ್ವದ ಎರಡು ತಂಡ 2 ದಿನಗಳ ಹಿಂದಷ್ಟೇ ಪತ್ತೆ ಹಚ್ಚಿದೆ. ಈ ನೆಲಮಾಳಿಗೆಗಳ ಸುತ್ತ ವೃತ್ತಾಕಾರದ ಗೋಡೆಯಂತಹ ರಚನೆ ಇದೆ.

ಅದರ ನಡುವೆ ಈ ನೆಲಮಾಳಿಗೆಗಳನ್ನು ನಿರ್ಮಿಸಲಾಗಿದೆ. ನೆಲಮಟ್ಟದಿಂದ ಸುಮಾರು 10 ಅಡಿ ಆಳದಲ್ಲಿರುವ ಈ ನೆಲಮಾಳಿಗೆಗಳು ದೂರದಿಂದ ನೋಡಿದರೆ ಮಣ್ಣಿನ ದಿಬ್ಬದಂತೆ ಕಾಣುತ್ತವೆ‌. ಆಳವಾದ ಕಂದಕಗಳನ್ನು ದಾಟಿ, ಕೊರಕಲು ಇಳಿದುಹೋದರೆ ಇವುಗಳನ್ನು ನೋಡಬಹುದು.

ಈ ನೆಲಮಾಳಿಗೆಗಳನ್ನು ಒಂದರ ಪಕ್ಕ ಒಂದರಂತೆ ನಿರ್ಮಿಸಿದ್ದು, 8 ಅಡಿ ಆಗಲ ಮತ್ತು 10 ಅಡಿ ಉದ್ದ ಇವೆ. ಒಳಗೆ ಪ್ರವೇಶಿಸಲು 3 ಅಡಿ ಎತ್ತರ ಮತ್ತು 2 ಅಡಿ ಅಗಲದ ಕಲ್ಲಿನ ದ್ಚಾರವಿದೆ‌‌. ಈ ದ್ವಾರ ಬಂಧಕ್ಕೆ ಅಗಳಿ ಹಾಕಲು 3.5 ಇಂಚು ಆಳವಾದ ರಂಧ್ರವನ್ನು ಕೊರೆಯಲಾಗಿದೆ.


Share It

You cannot copy content of this page