ಪೆನ್ ಡ್ರೈವ್ ಕೇಸ್: ಕಾರ್ತಿಕ್ ಜೊತೆಗಿನ ಶ್ರೇಯಸ್ ಪಟೇಲ್ ಫೋಟೋ ಫುಲ್ ವೈರಲ್

Share It

ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್​ಡ್ರೈವ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ ಪ್ರಕರಣಕ್ಕೆ ದೊಡ್ಡ ತಿರುವು ದೊರೆತಿದ್ದು, ರೇವಣ್ಣ ಕುಟುಂಬದ ಮಾಜಿ ಕಾರು ಚಾಲಕ ಕಾರ್ತಿಕ್​ ಹಾಸನ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಜತೆಗಿರುವ ಫೋಟೊ ವೈರಲ್ ಆಗುತ್ತಿದೆ.

ಪುಟ್ಟರಾಜ್ ಮನೆಯಲ್ಲಿ ಕಾರ್ತಿಕ್ ಮತ್ತು ಶ್ರೇಯಸ್ ಪಟೇಲ್ ಊಟ ಮಾಡಿದ್ದಾರೆ ಎನ್ನಲಾದ ಫೋಟೋ ವೈರಲ್ ಆಗುತ್ತಿದೆ. ಕಾರ್ತಿಕ್ ಪರಿಚಯವೇ ಇಲ್ಲ, ಆದರೆ, ಒಮ್ಮೆ ಮಾತ್ರ ಭೇಟಿಯಾಗಿದ್ದ ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್​ ಹಿಂದೆ ಹೇಳಿದ್ದರು. ಈಗ ಕಾರ್ತಿಕ್, ಶ್ರೇಯಸ್, ಪುಟ್ಟರಾಜು ಜತೆಗೆ ಇರುವ ಫೋಟೋ ವೈರಲ್ ಆಗಿವೆ.

ಡಿಸಿಎಂ ಡಿ.ಕೆ ಶಿವಕುಮಾರ್​​ಗೆ ಪೆನ್‌ಡ್ರೈವ್ ತಲುಪಿಸಿದ್ದು ಪುಟ್ಟರಾಜು ಎಂಬ ಆರೋಪವಿದೆ. ಈ ಬಗ್ಗೆ ಬಿಜೆಪಿ ಮುಖಂಡ ದೇವರಾಜೇಗೌಡ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು. ಇದೀಗ ಫೋಟೋವನ್ನು ಜೆಡಿಎಸ್ ಕಾರ್ಯಕರ್ತರು ವೈರಲ್ ಮಾಡಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ, ಪ್ರಜ್ವಲ್ ರೇವಣ್ಣ ಲೈಗಿಂಕ ಕಿರುಕುಳ ಪ್ರಕರಣದಲ್ಲಿ ಸೋರಿಕೆಯಾಗಿರುವ ವಿಡಿಯೋದಲ್ಲಿ ಕಾಣಿಸಿರುವ ಸಂತ್ರಸ್ತೆರನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಈಗಾಗಲೇ 9ಜನ ಸಂತ್ರಸ್ತೆಯರನ್ನು ಪತ್ತೆ ಹಚ್ಚರುವ ಎಸ್‌ಐಟಿ, ಹೇಳಿಕೆ ದಾಖಲು ಮಾಡಿದೆ.

ಇಬ್ಬರು ಸರ್ಕಾರಿ ಅಧಿಕಾರಿಗಳು ಸೇರಿದಂತೆ 9 ಜನರನ್ನು ಎಸ್​ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು, ಹೇಳಿಕೆಗಳನ್ನು ದಾಖಲು ಮಾಡಿದ್ದಾರೆ.


Share It
Previous post

ಹೊಸಕೋಟೆ ದೇವಸ್ಥಾನಕ್ಕೆ ಮುಸ್ಲಿಮರ ನೇಮಕ: ದ್ವೇಷ ಬಿತ್ತುವುದೇ ಬಿಜೆಪಿ ದುರ್ಬುದ್ದಿ: ರಾಮಲಿಂಗಾ ರೆಡ್ಡಿ ಗುದ್ದು

Next post

ಪೆನ್ ಡ್ರೈವ್ ಪ್ರಕರಣ: ದೇವರಾಜೇಗೌಡ ವ್ಯವಹಾರ ಕುರಿತ ಸಂಪೂರ್ಣ ಮಾಹಿತಿ ನನ್ನ ಬಳಿಯಿದೆ: ಎಂ.ಲಕ್ಷ್ಮಣ್

You May Have Missed

You cannot copy content of this page