ಉಪಯುಕ್ತ ರಾಜಕೀಯ ಸುದ್ದಿ

ಹೊಸಕೋಟೆ ದೇವಸ್ಥಾನಕ್ಕೆ ಮುಸ್ಲಿಮರ ನೇಮಕ: ದ್ವೇಷ ಬಿತ್ತುವುದೇ ಬಿಜೆಪಿ ದುರ್ಬುದ್ದಿ: ರಾಮಲಿಂಗಾ ರೆಡ್ಡಿ ಗುದ್ದು

Share It

ಬೆಂಗಳೂರು: ಹೊಸಕೋಟೆಯ ಶ್ರೀ ಅವಿಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವ ಸಮಿತಿಯಲ್ಲಿ ಮುಸ್ಲಿಂ ಸದಸ್ಯರೊಬ್ಬರನ್ನು ನೇಮಿಸಿರುವ ವಿಚಾರಕ್ಕೆ ಸುಳ್ಳು ಸುದ್ದಿ ಹರಡಿ ಕೋಮುದ್ವೇಷ ಕದಡಲು ಪ್ರಯತ್ನಿಸಿರುವ ಬಿಜೆಪಿ ನಡೆಗೆ ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದ್ದಾರೆ

ಸದಾ ಇಂತಹ ಕೆಟ್ಟ ವಿಷಯಗಳನ್ನೇ ಹುಡುಕುವ ಬಿಜೆಪಿಗರಿಗೆ ಮತ್ತೇನು ಒಳ್ಳೆಯ ಅಂಶಗಳು ಕಣ್ಣಿಗೆ ಬೀಳಲು ಸಾಧ್ಯ. ಸದಾ ಇಂತಹ ಕೋಮುದ್ವೇಷವೇ ನಿಮ್ಮ ಕೈ ಹಿಡಿಯುತ್ತದೆಂದು ಭ್ರಮಿಸಬೇಡಿ. ಜನ ಜಾಗೃತರಾಗುತ್ತಿದ್ದಾರೆ. ನಿಮ್ಮ ಯೋಗ್ಯತೆ ಜನತೆಗೆ ಗೊತ್ತಾಗುತ್ತಿದ್ದು, ಮುಂದಿನ ದಿನಗಳಲ್ಲಿ ನಿಮಗೆ ಮತ್ತಷ್ಟು ಪರಿಣಾಮಕಾರಿಯಾಗಿ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮೋತ್ಸವ ಕಾರ್ಯಕ್ರಮ ಸಮಿತಿಯಲ್ಲಿ ಸರ್ವ ಸಮುದಾಯವನ್ನು ಒಳಗೊಂಡು ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಇಲ್ಲಿ ಒಬ್ಬ ಮುಸ್ಲಿಂ ಸದಸ್ಯರು ಪ್ರತಿ ವರ್ಷ ಇದ್ದೇ ಇರುತ್ತಾರೆ. ೨೦೨೪ ನೇ ಸಾಲಿನ ಜಾತ್ರಾ ಮಹೋತ್ಸವ ಸಮಿತಿಗೆ ಸವಾಜ್ ಎಂಬ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ನೇಮಕ ಮಾಡಿ, ಮುಜರಾಯಿ ಇಲಾಖೆ ಆದೇಶ ಹೊರಡಿಸಿತ್ತು.

ಈ ಆದೇಶವನ್ನಿಟ್ಟುಕೊಂಡು ಬಿಜೆಪಿ ಅಪಪ್ರಚಾರ ಆರಂಭಿಸಿದ್ದು, ಹಿಂದೂ ದೇವಸ್ಥಾನದ ಜಾತ್ರಾ ಸಮಿತಿಯಲ್ಲಿಯೂ ಮುಸ್ಲಿಮರನ್ನು ತರುವ ಮೂಲಕ ಹಿಂದೂ ವಿರೋಧಿ ನೀತಿಯನ್ನು ಕಾಂಗ್ರೆಸ್ ಮುಂದುವರಿಸಿದೆ ಎಂದು ಟೀಕಿಸಲಾಗಿತ್ತು. ಇದನ್ನು ಬಿಜೆಪಿ ಹಿಂಬಾಲಕರು ಮತ್ತು ಹಿಂದೂ ಕಾರ್ಯಕರ್ತರು ವೈರಲ್ ಮಾಡುವ ಮೂಲಕ ಸಮಾಜದ ಸ್ವಾಸ್ಥö್ಯ ಕೆಡಿಸುವ ಪ್ರಯತ್ನ ನಡೆಸಿದ್ದರು.

ಇದಕ್ಕೆ ಉತ್ತರ ನೀಡಿರುವ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ, ವಾಸ್ತವದಲ್ಲಿ ಸಮಿತಿಯಲ್ಲಿ ಸರ್ವ ಸಮುದಾಯದ ಸದಸ್ಯರನ್ನು ನೇಮಕಗೊಳಿಸುವುದು ದೇಗುಲದಲ್ಲಿ ಹಿಂದಿನಿAದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಸಹ ಅಂದಿನ ಸಚಿವರಾಗಿದ್ದ ೨೦೨೨ ನೇ ಸಾಲಿನ ಅಫ್ಸರ್ ಎಂಬುವವರನ್ನು ಸದಸ್ಯರನ್ನಾಗಿ ಮಾಡಿದ್ದರು. ೨೦೨೦-೨೧ನೇ ಸಾಲಿನ ಸಮಿತಿಯಲ್ಲಿ ಸಹ ಇದೇ ಬಿಜೆಪಿ ಇಮ್ತಿಯಾಜ್ ಪಾಷಾ ಎಂಬುವವರು ಸದಸ್ಯರನ್ನಾಗಿ ಮಾಡಿತ್ತು ಎಂದು ದಾಖಲೆ ಸಮೇತ ಟ್ವೀಟ್ ಮಾಡಿದ್ದರು.

ಟ್ವೀಟ್ ಡಿಲೀಟ್ ಮಾಡಿದ ಬಿಜೆಪಿ: ವಿವಾಧ ತಾರಕ್ಕಕ್ಕೇರುತ್ತಿದ್ದಂತೆ, ಸಾವಿರಾರು ಹಿಂದೂ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರು ಬಿಜೆಪಿ ಮಾಡಿದ್ದ ಟ್ವೀಟ್ ಅನ್ನು ರೀ ಟ್ವಿಟ್ ಮಾಡುವ ಮೂಲಕ ವಾಟ್ಸಾಪ್ ಗ್ರೂಪ್‌ಗಳಲ್ಲಿಯೂ ಹಂಚಿಕೊAಡಿದ್ದೆರು. ಮುಜರಾಯಿ ಸಚಿವರ ಖಡಕ್ ಉತ್ತರ ಮತ್ತು ದಾಖಲೆಗಳ ಬಿಡುಗಡೆ ನಂತರ ಎಚ್ಚರವಾಗಿರುವ ಬಿಜೆಪಿ ತಾನು ಮಾಡಿದ್ದ ಟ್ವಿಟ್ ಅನ್ನು ಡಿಲೀಟ್ ಮಾಡಿದೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಅನೇಕರು ಈಗಲೂ ಸುತ್ತೋಲೆಯನ್ನು ಹಂಚುತ್ತಲೇ ಇದ್ದಾರೆ.

  • ಹಿಂದಿನ ಅವಧಿಯ ಎಲ್ಲ ಪಟ್ಟಿಗಳನ್ನು ಬಿಜೆಪಿ ತೆರೆದು ನೋಡಿ ಸ್ವಲ್ಪವಾದರೂ ವಿವೇಕದಿಂದ ವರ್ತಿಸಿದರೆ ಉತ್ತಮ. ಅನ್ಯಧರ್ಮಿಯರ ಬಗ್ಗೆ ದ್ವೇಷವನ್ನು ಬಿತ್ತಿ ಅವರ ವಿರುದ್ಧ ಹಿಂದೂ ಸಮುದಾಯವನ್ನು ಎತ್ತಿಕಟ್ಟುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಣಹದ್ದುಗಳಂತೆ ಸದಾ ಹಪಹಪಿಸುವ ಬಿಜೆಪಿಗರು ಸುಳ್ಳು ಮಾಹಿತಿಗಳನ್ನು ಹಂಚಿಕೊಳ್ಳುತ್ತ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದ್ದಾರೆ. ಬಿಜೆಪಿ ನಾಯಕರು ಮೊಸರಲ್ಲಿ ಕಲ್ಲು ಹುಡುಕುವ ಬುದ್ಧಿಯನ್ನು ಯಾವಾಗ ನಿಲ್ಲಿಸುತ್ತೀರಿ?
  • ರಾಮಲಿಂಗಾ ರೆಡ್ಡಿ, ಸಾರಿಗೆ ಮತ್ತು ಮುಜರಾಯಿ ಸಚಿವ

Share It

You cannot copy content of this page