ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಗೆ ಸಂಬ0ಧಿಸಿ ಸರಕಾರ ಎಸ್‌ಐಟಿ ರಚನೆ ಮಾಡಿದ್ದು, ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದ
ಎಸ್‌ಐಟಿ ತಂಡದಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಸಿಐಡಿ ತಂಡದಲ್ಲಿ ಕಾರ್ಯನಿರ್ವಹಿಸಿದ ಅನುಭವ ಇರುವ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಈ ಎಲ್ಲ ಅಧಿಕಾರಿಗಳೆಲ್ಲ ಹಿಂದೆ ವಿವಿಧ ಪ್ರಕರಣಗಳಲ್ಲಿ ಸೂಕ್ತ ತನಿಖೆ ನಡೆಸಿಸೈ ಎನಿಸಿಕೊಂಡವರಾಗಿದ್ದಾರೆ.
ಎಸ್‌ಐಟಿ ತಂಡದಲ್ಲಿ ಬಿ.ಕೆ.ಸಿಂಗ್ ಜತೆಗೆ ಇಬ್ಬರು ದಕ್ಷ ಅಧಿಕಾರಿಗಳಾದ ಸುಮನ್ ಡಿ.ಪೆನ್ನೇಕರ್, ಮೈಸೂರಿನ ಎಸ್‌ಪಿ ಸೀಮಾ ಲಾಟ್ಕರ್ ತಂಡದ ಪ್ರಮುಖ ಅಧಿಕಾರಿಗಳಾಗಿದ್ದಾರೆ. ಈ ತಂಡವನ್ನು ಭೇಟಿ ಮಾಡಿದ ಹಾಸನದ ಎಸ್.ಪಿ. ಮಹಮದ್ ಸುಜೀತಾ ಮಾಹಿತಿಯನ್ನು ಹಂಚಿಕೊAಡಿದ್ದಾರೆ.
ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಬಗ್ಗೆಯೂ ಈ ತಂಡ ಮೊದಲಿಗೆ ಮಾಹಿತಿ ಪಡೆಯಲಿದೆ. ಜತೆಗೆ, ವಿಡಿಯೋ ರೆಕಾರ್ಡ್ ಮಾಡಿದ ಮತ್ತು ಆ ವಿಡಿಯೋಗಳನ್ನು ಮೊಬೈಲ್‌ನಿಂದ ಬೇರೆಡೆಗೆ ವರ್ಗಾಯಿಸಿದವರ ಬಗ್ಗೆ ªಮಾಹಿತಿ ಸಂಗ್ರಹ ಮಾಡಲಿದೆ.
ಈ ಪ್ರಕರಣದ ತನಿಖೆಗೆ ಸಂಬAಧಿಸಿದAತೆ ಪ್ರಜ್ವಲ್ ರೇವಣ್ಣ ಅವರನ್ನು ಬಂಧನ ಮಾಡುವ ಸಾಧ್ಯತೆಯೂ ಇದ್ದು, ಅವರು ಈಗಾಗಲೇ ಜರ್ಮನಿಗೆ ಪಲಾಯನ ಮಾಡಿದ್ದಾರೆ ಎಂಬ ಮಾತುಗಳು ಇವೆ. ಅವರನ್ನು ಬಂಧನ ಮಾಡುವಂತೆ ಈಗಾಗಲೇ ಪ್ರತಿಭಟನೆಗಳು ಆರಂಭವಾಗಿವೆ.