ದೇವನಹಳ್ಳಿ : ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗೆ ದೇವಸ್ಥಾನದ ಜಾಗ ಭೂಸ್ವಾಧೀನವಾದ ಹಿನ್ನಲೆಯಲ್ಲಿ ಆಂಜನೇಯ ಸ್ವಾಮಿ ದೇಗುಲವನ್ನು ತೆರವು ಗೊಳಿಸಲಾಗಿತ್ತು ಆಂಜನೇಯ ಸ್ವಾಮಿ ಸೇವೆ ಮಾಡುವ ಉದ್ದೇಶದಿಂದ ನಮ್ಮ ಸ್ವಂತ ಜಮೀನಿನಲ್ಲಿ ಒಂದು ನೂರು ವರ್ಷಗಳ ಪುರಾತನ ದೇವಸ್ಥಾನವನ್ನು ಮತ್ತೆ ಪುನರ್ ಪ್ರತಿಷ್ಠಾಪನೆ ಮಾಡಿದ್ದೇವೆ, ಎಂದು ಶೆಟ್ಟೇರಹಳ್ಳಿಯ ನಿವಾಸಿ ಆಂಜನೇಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ದೇವರಾಜು ತಿಳಿಸಿದ್ದಾರೆ.
ದೇವನಹಳ್ಳಿ ಸಮೀಪದ ಶೆಟ್ಟೆರಹಳ್ಳಿಯಲ್ಲಿ ಶ್ರೀ ಆಂಜನೇಯ ಸ್ವಾಮಿಯ ಪುನರ್ ಪ್ರತಿಷ್ಠಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇವಸ್ಥಾನವನ್ನು ಸುಮಾರು 12 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಸುಮಾರು ನೂರು ವರ್ಷಗಳ ಹಿಂದೆ ಶೆಟ್ಟೇರಹಳ್ಳಿಯ ನಿವಾಸಿ ಬೈಯಮ್ಮ ಎಂಬುವರು ಪುಟ್ಟ ಮಂಟಪ ಒಂದನ್ನು ನಿರ್ಮಿಸಿ, ಅದರಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಪ್ರತಿಷ್ಠಾಪಿಸಿದ್ದರು ಇಲ್ಲಿ ದೊಡ್ಡ ರಸ್ತೆ ಇರಲಿಲ್ಲ ಚಿಕ್ಕದಾದ ದಾರಿ ಇತ್ತು ಆಗ ದಾರಿಯಲ್ಲಿ ಬಾಯಾರಿಕೆಯಿಂದ ಬರುವ ದಾರಿ ಹೋಕರಿಗೆ ಅವರು ಕುಡಿಯಲು ನೀರು ಕೊಡುತಿದ್ದರು ನಂತರ ಅವರು ದಣಿವಾರಿಸಿಕೊಂಡು ಮುಂದೆ ಸಾಗುತ್ತಿದ್ದರು ಅವರ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ದೇವಸ್ಥಾನ ಪ್ರತಿಷ್ಠಾಪಿಸಲು ಸಂಕಲ್ಪ ಮಾಡಿ ಈ ಕಾರ್ಯ ಮಾಡಿದ್ದೇವೆ ಇದರಿಂದ ಸುತ್ತಮುತ್ತಲಿನ ಈ ದೇಗುಲದ ಭಕ್ತರಿಗೂ ಅನುಕೂಲ ವಾಗಲಿದೆ ಭಕ್ತರು ಭಕ್ತಿಯಿಂದ ಬೇಡಿದ್ದನ್ನು ಕೊಡುವ ಸ್ವಾಮಿಯ ಸೇವೆಗಾಗಿ ದೇವರನ್ನು ಪುನರ್ ಪ್ರತಿಷ್ಠಾಪಿಸಲಾಗಿದೆ, ಎಂದು ತಿಳಿಸಿದರು.
ದೇವನಹಳ್ಳಿ ತಾಲ್ಲೂಕು ಲಾರಿ ಮಾಲಿಕರ ಸಂಘದ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ನಾಡಿನ ಯಾವುದೇ ಗ್ರಾಮಕ್ಕೆ ತೆರಳಿದರು ಶ್ರೀ ಆಂಜನೇಯ ಸ್ವಾಮಿಗೆ ಕೈಮುಗಿದು ನಂತರ ಗ್ರಾಮಕ್ಕೆ ಭೇಟಿ ಕೊಡುವ ಸಂಪ್ರದಾಯ ಹಿಂದಿನಿಂದಲೂ ಪಾಲಿಸುತ್ತ ಬಂದಿದ್ದೇವೆ. ಆಂಜನೇಯ ದೇವರನ್ನು ವಿಶಿಷ್ಠವಾಗಿ ಎಲ್ಲರೂ ಭಕ್ತಿಯಿಂದ ಪೂಜಿಸುತ್ತಾರೆ ಈ ದೇಗುಲದ ಪುನರ್ ಸ್ಥಾಪನೆಯಿಂದ ಈ ಭಾಗದಲ್ಲಿ ಭಗವಂತ ಕಾಲಕಾಲಕ್ಕೆ ಮಳೆ ಸುರಿಸಿ, ಸಮೃದ್ಧ ಬೆಳೆ ಕರುಣಿಸುವ ಮೂಲಕ ಸಕಲ ಜೀವರಾಶಿಗಳು ಸುಖ ಶಾಂತಿಯಿಂದ ಬದುಕುವಂತಾಗಲಿ ಎಂಬುದೆ ದೇವರಲ್ಲಿ ನಮ್ಮ ಬೇಡಿಕೆಯಾಗಿದೆ ನಿತ್ಯ ಪೂಜೆ ಪುನಸ್ಕಾರ ಗಳು ನಡೆದು ಭಕ್ತರ ಸಂಕಷ್ಟಗಳು ನಿವಾರಣೆಯಾಗಲಿ ಎಂದು ಶುಭ ಹಾರೈಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಆಂಜನೇಯ ಸ್ವಾಮಿ ಭಕ್ತಾದಿಗಳಾದ ಬ್ರಹ್ಮಾನಂದರೆಡ್ಡಿ, ರವಿ ಕುಮಾರ್, ದೇವರಾಜು, ಸಿದ್ದರಾಜು, ಮುನಿರಾಜು, ನಾಗರತ್ನಮ್ಮ, ನಾರಾಯಣಮ್ಮ, ನಂಜಪ್ಪ, ಶಿವರಾಜು, ದೇವಸ್ಥಾನ ಪ್ರಧಾನ ಅರ್ಚಕ ಬಿದಲೂರು ಗೌರಿಶಂಕರ್ ಸೇರಿದಂತೆ ನೂರಾರು ಗ್ರಾಮಸ್ಥರು ಇದ್ದರು.