ಆರೋಗ್ಯ ಉಪಯುಕ್ತ ಸುದ್ದಿ

ಬಿಸಿಲಿನ ತಾಪಕ್ಕೆ ಶಾಲೆಗಳೇ ಬಂದ್ !

Share It


ಬೆಂಗಳೂರು:ಬಿಸಿಲಿನ ಧಗೆ ಅದೆಷ್ಟಿದೆಯೆಂದರೆ, ರಾಜ್ಯದಲ್ಲಿ ಕಳೆದ ಐವತ್ತು ವರ್ಷದಲ್ಲೇ ಅತ್ಯಧಿಕ ಉಷ್ಣಾಂಶ ದಾಖಲಾಗಿದೆ. ಮನೆಯಲ್ಲಿದ್ದರೆ ಸೆಖೆ, ಹೊರಗೆ ಬಂದರೆ ಬಿಸಿಲಿನ ಝಳ. ಈ ನಡುವೆ ಬಿಸಿಲಿನ ತಾಪಕ್ಕೆ ಶಾಲೆಗೆ ರಜೆ ಘೋಷಿಸಿರುವ ಘಟನೆ ನಡೆದಿದೆ.

ಈ ನಿರ್ಧಾರ ತೆಗೆದುಕೊಂಡಿರುವುದು ಸಧ್ಯಕ್ಕೆ ನಮ್ಮ ರಾಜ್ಯದಲ್ಲಲ್ಲ. ಜಾರ್ಖಂಡ್ ರಾಜ್ಯದಾದ್ಯಂತ ಬಿಸಿಲಿನ ತಾಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಮಂಗಳವಾರದಿAದ ಅಂಗನವಾಡಿಯಿAದ ಹಿಡಿದು ೮ನೇ ತರಗತಿವರೆಗಿನ ತರಗತಿಗಳನ್ನು ಸ್ಥಗಿತಗೊಳಿಸಿ ಆದೇಶ ನೀಡಿದೆ. ಬೆಳಗಿನ ಪ್ರಾರ್ಥನೆ, ಕ್ರೀಡೆ ಮತ್ತು ಇತರ ಚಟುವಟಿಕೆ ಹೊರತುಪಡಿಸಿ ೯ ರಿಂದ ೧೨ನೇ ತರಗತಿಗಳು ಬೆಳಿಗ್ಗೆ ೭ ರಿಂದ ೧೧.೩೦ ರವರೆಗೆ ಕಾರ್ಯನಿರ್ವಹಿಸುತ್ತವೆ ಎನ್ನಲಾಗಿದೆ.

ಸರ್ಕಾರಿ, ಖಾಸಗಿ, ಅನುದಾನಿತ ಮತ್ತು ಅನುದಾನರಹಿತ ಸೇರಿ ಎಲ್ಲಾ ರೀತಿಯ ಶಾಲೆಗಳಿಗೂ ಈ ಆದೇಶ ಅನ್ವಯಿಸುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತಿಳಿಸಿದೆ. ಬಿಸಿಗಾಳಿ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಸರ್ಕಾರಿ, ಖಾಸಗಿ, ಅನುದಾನಿತ ಮತ್ತು ಅನುದಾನರಹಿತ ಸೇರಿ ಎಲ್ಲಾ ವರ್ಗದ ಶಾಲೆಗಳಲ್ಲಿ ಶಿಶುವಿಹಾರದಿಂದ ೮ ನೇ ತರಗತಿವರೆಗಿನ ತರಗತಿಗಳನ್ನು ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಿದೆ.

ಶಿಕ್ಷಕರು ಮತ್ತು ಬೋಧಕೇತರರಿಗೆ ಬೇಸಿಗೆ ರಜೆ ಕುರಿತು ಪ್ರತ್ಯೇಕ ಆದೇಶ ಹೊರಡಿಸಲಾಗುವುದು. ನಿಗದಿತ ಸಮಯದಲ್ಲಿ ಪ್ರತಿದಿನ ಶಾಲೆಗೆ ಸಿಬ್ಬಂದಿ ಹಾಜರಾಗಬೇಕು. ಆದರೆ, ಸರ್ಕಾರಿ, ಸರಕಾರೇತರ ಅನುದಾನಿತ, ಅನುದಾನ ರಹಿತ ಶಾಲೆಗಳ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಇದು ಅನ್ವಯಿಸುವುದಿಲ್ಲ.

ಬೊಕಾರೊ, ಧನ್‌ಬಾದ್, ಜಮ್ತಾರಾ, ದಿಯೋಘರ್, ದುಮ್ಕಾ, ಪಾಕುರ್, ಗೊಡ್ಡಾ, ಸಾಹಿಬ್‌ಗಂಜ್, ಸೆರೈಕೆಲಾ-ಖಾರ್ಸ್ವಾನ್ ಮತ್ತು ಪೂರ್ವ ಮತ್ತು ಪಶ್ಚಿಮ ಸಿಂಗ್‌ಭೂಮ್‌ನಲ್ಲಿ ಸೋಮವಾರ ಅಧಿಕ ಬಿಸಿಗಾಳಿ ದಾಖಲಾಗಿದೆ. ಸೆರೈಕೆಲಾ (೪೫.೧. ಡಿಗ್ರಿ ಸೆಲ್ಸಿಯಸ್)ದಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದೆ.

ನಂತರ ಕ್ರಮವಾಗಿ ಗೊಡ್ಡಾ ೪೪.೬, ಜೆಮ್‌ಶೆಡ್‌ಪುರ ೪೪ ಮತ್ತು ಡಾಲ್ಟೊಂಗAಜ್ ೪೩.೮ ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ. ರಾಜ್ಯದ ರಾಜಧಾನಿ ರಾಂಚಿಯಲ್ಲಿ ಗರಿಷ್ಠ ತಾಪಮಾನ ೩೯.೬ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


Share It

You cannot copy content of this page