ರಾಜಕೀಯ ಸುದ್ದಿ

ಮತ್ತೇ ಒಂದಾದರು ಹಳೇ ದೋಸ್ತಿಗಳು

Share It

ಲೋಕಸಭಾ ಚುನಾವಣೆಯಲ್ಲಿ ಸಹಕರಿಸುವಂತೆ ಸಿಎಂ ಕೋರಿದ್ದಾರೆ: ಶ್ರೀನಿವಾಸ್ ಪ್ರಸಾದ್

ಮೈಸೂರು: ಸಿಎಂ ಸಿದ್ದರಾಮಯ್ಯ ಮತ್ತು ಚಾಮರಾಜನಗರ ಬಿಜೆಪಿ ಹಾಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ನಡುವೆ ದಶಕಗಳಿಂದ ಸ್ನೇಹವಿದೆ.
ಆದರೆ ಶ್ರೀನಿವಾಸ್ ಪ್ರಸಾದ್ ಅವರೇ ಇಂದು ಮಾಧ್ಯಮಗಳಿಗೆ ಹೇಳಿದ ಹಾಗೆ ಬೇರೆ ಬೇರೆ ಕಾರಣಗಳಿಗೆ ಅವರಿಬ್ಬರು ದೂರವಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿರುವ ಸಂಸದರ ಮನೆಗೆ ಇಂದು ಸಿಎಂ ಸಿದ್ದರಾಮಯ್ಯ ಅವರು ಶ್ರೀನಿವಾಸ್ ಪ್ರಸಾದ್ ಭೇಟಿ ನೀಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು.

ಸಿಎಂ ಸಿದ್ದರಾಮಯ್ಯ ತೆರಳಿದ ಬಳಿಕ ಪತ್ರಕರ್ತರೊಡನೆ ಮಾತಾಡಿದ ಶ್ರೀನಿವಾಸ್ ಪ್ರಸಾದ್, ಮುಖ್ಯಮಂತ್ರಿಯವರ ಜೊತೆ ಬಹಳ ವರ್ಷಗಳಿಂದ ಮಾತಾಡಿರಲಿಲ್ಲ, ಅವರು ಇಂದು ಮನೆಗೆ ಬಂದಿದ್ದರು ಮತ್ತು ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದರು. ತಮ್ಮ ನಡುವೆ ರಾಜಕಾರಣದ ಬಗ್ಗೆ ಹೆಚ್ಚಿನ ಚರ್ಚೆಯೇನೂ ನಡೆಯಲಿಲ್ಲ, ಆದರೆ ತಾನೀಗ ರಾಜಕೀಯದಿಂದ ನಿವೃತ್ತನಾಗಿರುವುದರಿಂದ ಚುನಾವಣೆಯಲ್ಲಿ ಸಹಕರಿಸುವಂತೆ ಸಿದ್ದರಾಮಯ್ಯ ಕೋರಿದರು ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ನಾಳೆ ರಾಜ್ಯಕ್ಕೆ ಅಗಮಿಸುತ್ತಿದ್ದು ಅವರ ಕಾರ್ಯಕ್ರಮದಲ್ಲಿ ಭಾಗಿಯಾಗ್ತೀರಾ ಅಂತ ಕೇಳಿದ ಪ್ರಶ್ನೆಗೆ ಅವರು, ಅರೋಗ್ಯ ಸರಿಯಿಲ್ಲದ ಕಾರಣ ಯಾವುದೇ ಚುನಾವಣಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದೇನೆ ಮತ್ತು ತನಗೆ ಮನೆಯಿಂದ ಹೊರಗೆ ಹೋಗುವುದು ಸಾಧ್ಯವಾಗುತ್ತಿಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು.


Share It

You cannot copy content of this page